ನಂದಿನಿ ನದಿ ಉಳಿಸಿ ಹೋರಾಟ ಅಭಿಯಾನ
Thursday, March 6, 2025
ಪಾವಂಜೆ ಸಮೀಪದ ಕಂಡೇವಿನಲ್ಲಿರುವ ನಂದಿನಿ ನದಿಯ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದು,ಸ್ಥಳೀಯರಿಂದ ನಂದಿನಿ ನದಿ ಉಳಿಸಿ ಹೋರಾಟ ಅಭಿಯಾನವು ನಡೆಯಿತು.ಸುಮಾರು 800 ವರ್ಷಗಳ ಇತಿಹಾಸವಿರುವಂತಹ ಕಂಡೇವಿನ ಧರ್ಮರಸು ಉಳ್ಳಾಯ ದೈವಸ್ಥಾನ ವಾಗಿದ್ದು,ಇಲ್ಲಿ ವರ್ಷಾವಧಿ ಮೀನು ಹಿಡಿಯುವ ಜಾತ್ರೆಯು ನಡೆಯುತ್ತದೆ.ಇದೀಗ ನದಿಯ ನೀರು ಕಲುಷಿತಗೊಂಡ ಪರಿಣಾಮ ಮೀನು ಹಿಡಿಯುವ ಜಾತ್ರೆಗೂ ಸಂಕಷ್ಟ ಎದುರಾಗಿದೆ.ಈ ಬಗ್ಗೆ ಜನಪ್ರತಿನಿಧಿಗಳು,ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಕೂಡಲೇ ಗಮನಹರಿಸಿ ನಂದಿನಿ ನದಿಯ ಸ್ವಚ್ಚತೆಯನ್ನು ಉಳಿಸುವಲ್ಲಿ ಕೈಜೋಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.