ಕಟೀಲು ದೇವಳಕ್ಕೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಭೇಟಿ
Tuesday, March 4, 2025
ಕಟೀಲು :ಪುರಾಣ ಪ್ರಸಿದ್ದ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಖ್ಯಾತ ಹಿಂದಿ ಚಲನಚಿತ್ರ ನಟಿ, ಬಿ ಜೆ ಪಿ ಸಂಸದೆ ಕಂಗನಾ ರಾಣಾವತ್ ರವರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.ದೇವಸ್ಥಾನದ ವತಿಯಿಂದ ಅವರನ್ನು ಅನುವಂಶಿಕ ಅರ್ಚಕರಾದ ಹರಿನಾರಾಯಣ ದಾಸ ಆಸ್ರಣ್ಣ ಹಾಗೂ ಅನಂತಪದ್ಮನಾಭ ಆಸ್ರಣ್ಣ ಅವರು ಶ್ರೀದೇವರ ಶೇಷ ವಸ್ತ್ರ,ಪ್ರಸಾದ ನೀಡಿ ಗೌರವಿಸಿದರು. ದೇವಸ್ಥಾನದ ಅನುವಂಶಿಕ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಅವರು ಕ್ಷೇತ್ರದ ಬಗ್ಗೆ ಕಂಗನಾ ರಾಣಾವತ್ ಅವರಿಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭ ಕಮಲಾದೇವಿ ಪ್ರಸಾದ ಆಸ್ರಣ್ಣ, ಸಂಸದ ಕ್ಯಾ.ಬೃಜೇಶ್ ಚೌಟ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು,ಲೋಕೇಶ್ ಶೆಟ್ಟಿ ಬರ್ಕೆ,ಕಿಶೋರ್ ಶೆಟ್ಟಿ ಕೊಡೆತ್ತೂರುಗುತ್ತು,ಮೋಹನ್ ದಾಸ್ ಭಂಡಾರಿ ,ಶೈಲೇಶ್ ಅಂಚನ್ ,ಪ್ರೇಮರಾಜ್ ಶೆಟ್ಟಿ,ಪ್ರವೀಣ್ ಭಂಡಾರಿ,ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಭುವನಾಭಿರಾಮ ಉಡುಪ,ಸತೀಶ್ ಶೆಟ್ಟಿ ಹಾಗೂ ಮೊದಲಾದವರು ಇದ್ದರು.