
ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದಲ್ಲಿ ವಿಜೃಂಭಣೆಯ ಹಗಲು ರಥೋತ್ಸವ
Tuesday, March 4, 2025
ಹಳೆಯಂಗಡಿ: ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಹಗಲು ರಥೋತ್ಸವ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ತಂತ್ರಿಗಳಾದ ಕೊಡವೂರು ರಾಧಾಕೃಷ್ಣ ಉಪಾಧ್ಯಾಯ ಹಾಗೂ ಅರ್ಚಕ ವಾಸುದೇವ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಮಹಾಪೂಜೆ, ಶ್ರೀ ದೇವರ ಉತ್ಸವ ಬಲಿ ಹೊರಟು ಹಗಲು ರಥೋತ್ಸವ, ಪ್ರಸಾದ ವಿತರಣೆ, ಮಹಾ ಅನ್ನ ಸಂತರ್ಪಣೆ ವಿಜೃಂಭಣೆಯಿಂದ ನಡೆಯಿತು
ರಾತ್ರಿ ಪಲ್ಲಕ್ಕಿ ಉತ್ಸವ, ಬಯನ ಬಲಿ, ಕಟ್ಟೆ ಪೂಜೆ,ಭೂತ ಬಲಿ, ಕವಾಟ ಬಂಧನ ನಡೆಯಿತು
ಈ ಸಂದರ್ಭ ಬಪ್ಪನಾಡು ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ ,ಹಿರಿಯ ವಿದ್ವಾಂಸ ವೇದಮೂರ್ತಿ ಕೃಷ್ಣ ಭಟ್ ಪಾವಂಜೆ, ಶಿವಳ್ಳಿ ಸ್ಪಂದನ ಪಾವಂಜೆ ವಲಯದ ಅಧ್ಯಕ್ಷ ಸತೀಶ್ ಭಟ್, ಕೃಷ್ಣ ಭಟ್ ಕದ್ರಿ, ಶಶೀoದ್ರ ಸಾಲ್ಯಾನ್,ಪ್ರೇಮಲತಾ ಯೋಗೀಶ್, ಜಯ ಕೃಷ್ಣ ಕೋಟ್ಯಾನ್,ಗಣೇಶ್ ಬಂಗೇರ,ಎಸ್.ಕೆ. ಪಿ ಎ ನ ಮೋಹನ್ ರಾವ್,ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.