
ಕರಾವಳಿಯ ಅಭಿವೃದ್ಧಿಗೆ ಬೃಹತ್ ಪ್ಯಾಕೇಜ್ ಅಗತ್ಯತೆ ಇದೆ ,ಸರಕಾರದ ಗಮನಸೆಳೆದ ಕರಾವಳಿಯ ಬಿಜೆಪಿ ಶಾಸಕರು
Friday, March 14, 2025
ಮಾಜಿ ಸಚಿವ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಮಾತಿಗಿಳಿದ ಶಾಸಕರಾದ ಭರತ್ ಶೆಟ್ಟಿ, ಹರೀಶ್ ಪೂಂಜ ಹಾಗೂ ಉಮಾನಾಥ ಕೋಟ್ಯಾನ್ ಅವರು ಕರಾವಳಿಯ ಅಭಿವೃದ್ಧಿಗೆ ಬೃಹತ್ ಪ್ಯಾಕೇಜ್ ಒಂದರ ಅಗತ್ಯವಿದೆ ಎಂದು ಸರಕಾರದ ಗಮನ ಸೆಳೆದರು.
ಶಾಸಕ ಸುನಿಲ್ ಕುಮಾರ್ ಮಾತನಾಡಿ ದೇವಸ್ಥಾನದ ನಿರ್ವಹಣೆ
ಹೋಟೆಲ್ ನಿರ್ವಹಣೆ
ಖಾಸಗಿ ಬಸ್ ನಿರ್ವಹಣೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ.
ಇದರೊಂದಿಗೆ ಶಿಕ್ಷಣ ಆರೋಗ್ಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೂಡ ಮುಂದಿದೆ.
ಅಭಿವೃದ್ಧಿಯ ವಿಚಾರ ಬಂದಾಗ ಜನರು ಬಯಸಿದಷ್ಟು ಪ್ರಗತಿ ಸಾಧ್ಯವಾಗಿಲ್ಲ.
ಪ್ರವಾಸೋದ್ಯಮದ ಅಭಿವೃದ್ಧಿಗೆ ಸಿ ಆರ್ ಜೆಡ್ ರಿಯಾಯಿತಿ ,
ಬೃಹತ್ ಬಂದರುಗಳ ನಿರ್ಮಾಣ ,
ಕುಡಿಯುವ ನೀರಿಗಾಗಿ ಪಶ್ಚಿಮ ವಾಹಿನಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಮುಂದಿಟ್ಟಿದ್ದಾರೆ.
ಶಾಸಕರಾದ ಡಾಕ್ಟರ್ ಭರತ್ ಶೆಟ್ಟಿ ಮಾತನಾಡಿ ಕರಾವಳಿ 7/ಗಂಟೆ ಬಳಿಕ ಸ್ಥಬ್ದವಾಗುತ್ತದೆ ಎಂಬುದು ಉಪಮುಖ್ಯಮಂತ್ರಿಗಳ ತಪ್ಪು ಕಲ್ಪನೆ ನಮ್ಮ ಪರಂಪರೆ ಯಕ್ಷಗಾನ,ನೇಮ,ನಾಟಕ ಹೀಗೆ ವಿವಿಧ ಚಟುವಟಿಕೆ ಗ್ರಾಮಾಂತರದಲ್ಲಿ ನಡೆಯುತ್ತಲೇ ಇರುತ್ತದೆ ಎಂದರು.
ಜಿಲ್ಲೆಯಲ್ಲಿ ಮಾದಕ ದ್ರವ್ಯ ಜಾಲವನ್ನು ಭೇದಿಸದೆ ಹೋದಲ್ಲಿ ಯುವ ಜನಾಂಗ ದಾರಿ ತಪ್ಪುವ ಆತಂಕವಿದೆ
ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಭವಿಷ್ಯದ ನಿಟ್ಟಿನಲ್ಲಿ ಗಂಭೀರ ಕ್ರಮದ ಅಗತ್ಯವಿದೆ.
ಇನ್ನು ಕರಾವಳಿ ಅಭಿವೃದ್ಧಿಗೆ ಐಟಿಬಿಟಿ ಪ್ರಮುಖ ಯೋಜನೆಯಾಗಿದೆ. ಸರಳ ರೀತಿಯಲ್ಲಿ ಅನುಷ್ಠಾನಕ್ಕೆ ಸರಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೇರಳದಲ್ಲಿ ಆಯುಷ್ಮಾನ್ ದಾಖಲೆಗಳು ಬಳಕೆಯಾಗುತ್ತಿದ್ದರೆ.
ಕರ್ನಾಟಕದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಸೌಲಭ್ಯ ದೊರಕುತ್ತಿಲ್ಲ.
ಸರಕಾರ ಈ ಬಗ್ಗೆ ಚಿಂತಿಸಬೇಕು ಎಂದರು.
ನದಿ ಮಾಲಿನ್ಯ ತಡೆಗೆ ಒಳಚರಂಡಿ ಸಂಸ್ಕರಣ ಘಟಕಗಳು ಮೇಲ್ದರ್ಜೆಗೆ ಏರಿಸಬೇಕು.
ದಿನದ 24 ಗಂಟೆ ವಿದ್ಯುತ್ ವ್ಯವಸ್ಥೆ, ಮೋಟಾರ್ ಪಂಪ್ ಗಳ ವ್ಯವಸ್ಥೆ ಬಳಕೆಯ ದ ನೀರನ್ನ ಬೃಹತ್ ಕಂಪನಿಗಳು ಬಳಸುಕೊಳ್ಳುವ ಯೋಜನೆ, ದೊರಕಿದಾಗ ಸ್ವಚ್ಛತೆಗೆ ಆದ್ಯತೆ ನೀಡಲು ಸಾಧ್ಯವಾಗುತ್ತದೆ ಎಂದು ಸದನದ ಗಮನ ಸೆಳೆದರು.
ಹರೀಶ್ ಪೂಂಜಾ ಅವರು ನದಿ ಪ್ರವಾಸೋದ್ಯಮದ, ಹೈಕೋರ್ಟ್ ಪೀಠದ ಪ್ರಾಮುಖ್ಯತೆ ಕುರಿತಂತೆ ಗಮನ ಸೆಳೆದಿದ್ದಾರೆ.
ಕರಾವಳಿ ಜಿಲ್ಲೆಯ ಅಭಿವೃದ್ಧಿ ಹಾಗೂ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಟ್ಟ ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಶಾಸಕರು ಇದೇ ಸಂದರ್ಭ ಕೃತಜ್ಞತೆಯ ವ್ಯಕ್ತಪಡಿಸಿದರು.