ಮೂಲ್ಕಿ : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ, ಕಿನ್ನಿಗೋಳಿ ಲಯನ್ಸ್, ಕಿನ್ನಿಗೋಳಿ ರೋಟರಿ, ರಾಗ್ ರಂಗ್ ಇವೆಂಟ್ಸ್ ಸಹಯೋಗದಲ್ಲಿ ಐಕಳ ಪೊಂಪೈ ಕಾಲೇಜಿನಲ್ಲಿ ಜ್ಞಾನಯಾನ ಗೀತ ಗಾಯನ ತರಬೇತಿ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ನಡೆಯಿತು.
ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ, ಪುನರೂರು ಪ್ರತಿಷ್ಟಾನದ ದೇವಪ್ರಸಾದ ಪುನರೂರು, ಲಯನ್ಸ್‌ನ ಸುಧಾಕರ ಶೆಟ್ಟಿ, ರೋಟರಿಯ ಧನಂಜಯ ಶೆಟ್ಟಿಗಾರ್, ಪೊಂಪೈ ಕಾಲೇಜಿನ ಪ್ರಾಚಾರ್ಯ ಡಾ. ಪುರುಷೋತ್ತಮ ಕೆ.ವಿ. ಮತ್ತಿತರರಿದ್ದರು.
ತೋನ್ಸೆ ಪುಷ್ಕಳ್ ಕುಮಾರ, ಸಂಗೀತ ಬಾಲಚಂದ್ರ, ರವೀಂದ್ರ ಪ್ರಭು ಪರಿಸರದ ಕಾಲೇಜುಗಳ ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.