-->


ಜುಮಾದಿ ಬಂಟ,ಪರಿವಾರ ದೈವಗಳ ಪುನಃ ಪ್ರತಿಷ್ಠೆ ಧರ್ಮ ನೇಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಜುಮಾದಿ ಬಂಟ,ಪರಿವಾರ ದೈವಗಳ ಪುನಃ ಪ್ರತಿಷ್ಠೆ ಧರ್ಮ ನೇಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಜಪೆ:ಪೇಜಾವರ ಪೋರ್ಕೋಡಿಯ ದೊಡ್ಡಕಂಬಳಗುತ್ತು ಕುಟುಂಬಸ್ಥರ  ಜುಮಾದಿ ಬಂಟ ಹಾಗೂ ಪರಿವಾರ ದೈವಗಳ  ನೂತನ ದೈವ ಚಾವಡಿಯ  ಪ್ರವೇಶೋತ್ಸವ,ಜುಮಾದಿ ಬಂಟ  ಹಾಗೂ ಪರಿವಾರ ದೈವಗಳಿಗೆ ಪುನರ್ ಪ್ರತಿಷ್ಠೆ ,ಕಲಶಾಭಿಷೇಕ,ಧರ್ಮನೇಮ ಮತ್ತು ಯಕ್ಷಗಾನ ಸೇವೆಯು ಎ.6 ರಿಂದ ಎ.8 ರ ತನಕ ದೊಡ್ಡ ಕಂಬಳಗುತ್ತು ಪೇಜಾವರ  ಪೊರ್ಕೋಡಿ ಯಲ್ಲಿ ವಿಜೃಂಭಣೆಯಿಂದ ಜರುಗಲಿದ್ದು,ಆ ಪ್ರಯುಕ್ತ  ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬುಧವಾರದಂದು ನಡೆಯಿತು.

ಪೊರ್ಕೋಡಿ ಶ್ರೀಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟರಮಣ ಭಟ್ ಮಾತನಾಡಿ  
ಪುಣ್ಯದ ಕಾರ್ಯಕ್ಕೆ  ದೈವ ದೇವರ ಅನುಗ್ರಹವಿರಲಿ.ಕಾರ್ಯಕ್ಕೆ ಸರ್ವರ ಸಹಕಾರ ಅತ್ಯಗತ್ಯ ಎಂದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಹಾಗೂ ಧಾರ್ಮಿಕ ಮುಖಂಡ ಬಡಾಜೆಗುತ್ತು ರವಿಶಂಕರ್ ಶೆಟ್ಟಿ, ದೊಡ್ಡಕಂಬಳಗುತ್ತು ಡಾ.ಕರುಣಾಕರ ಅಡುಪ ಅವರು ಸಾಂದರ್ಭಿಕವಾಗಿ ಮಾತನಾಡಿದರು.

ದೇಗುಲದ ವತಿಯಿಂದ ಬಡಾಜೆಗುತ್ತು ರವಿಶಂಕರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದಪ್ರಸಾದ್ ಸಾಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದಿವಾಕರ ಆಳ್ವ ತೋಕೂರುಗುತ್ತು ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಡಾ.ಕರುಣಾಕರ ಅಡುಪ ದೊಡ್ಡಕಂಬಳಗುತ್ತು, ಬಾಲಕೃಷ್ಣ ಶೆಟ್ಟಿ ದೊಡ್ಡಕಂಬಳಗುತ್ತು ತಾರಬರಿ ದೈವಸ್ಥಾನದ ಅರ್ಚಕ ಮಂಜು ಪೂಜಾರಿ, ಕೃಷ್ಣಪ್ಪ ಪೂಜಾರಿ ಕಾನ, ಅರ್ಕುಳ ದೇವಸ್ಯ ಪ್ರಕಾಶ್ಚಂದ್ರ ರೈ ತುಂಬೆಗುತ್ತು ಮನೆತನದ ಅರುಣ್ ಆಳ್ವ, ಜೀವನ್ ಆಳ್ವ ಉಪಸ್ಥಿತರಿದ್ದರು.

ವಿಜಯ ಕುಮಾರ್ ಕೆಂಜಾರು ಕಾನ ಸ್ವಾಗತಿಸಿ ದಿನೇಶ್ ಶೆಟ್ಟಿ ಚಿಕ್ಕಪರಾರಿ ವಂದಿಸಿದರು. ಸುಕೇಶ್ ಶೆಟ್ಟಿ ಮುಂಡಾರುಗುತ್ತು ಕಾರ್ಯಕ್ರಮ ನಿರೂಪಿಸಿದರು.

ದೊಡ್ಡಕಂಬಳ ಮನೆತನದ ಪ್ರಮುಖರು, ಪೊರ್ಕೋಡಿ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article