ಆದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ,ಹೊರೆ ಕಾಣಿಕೆ ಕೇಂದ್ರದ ಉದ್ಘಾಟನೆ
Tuesday, March 11, 2025
ಆದ್ಯಪಾಡಿ: ಆದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಮಾರ್ಚ್ 9 ರಿಂದ ಬ್ರಹ್ಮಕಲಶೋತ್ಸವದ ಧಾರ್ಮಿಕ ಪ್ರಕ್ರಿಯೆಗಳು ಆರಂಭಗೊಂಡಿದ್ದು ಮಾರ್ಚ್ 16ರಂದು ಬ್ರಹ್ಮಕಲಶೋತ್ಸವ ನೆರವೇರಲಿದೆ.
ಈ ಪ್ರಯುಕ್ತ ಹೋರೆ ಕಾಣಿಕೆ ಕೇಂದ್ರವನ್ನು
ಸೋಮವಾರ ಉದ್ಘಾಟಿಸಲಾಯಿತು.
ಬಜಪೆಯ ಶಕ್ತಿಮಂಟಪದಲ್ಲಿ ಉದ್ಯಮಿ ಶಾಂತಿ ಇಂಡಸ್ಟ್ರಿ ಮಾಲಕರಾದ ರಾಘವೇಂದ್ರ ಆಚಾರ್ಯ ಅವರು ಉದ್ಘಾಟಿಸಿ ಶುಭ ಕೋರಿದರು.
ಕೈಕಂಬದಲ್ಲಿ ಎರಡನೆಯ ಹೊರೆ ಕಾಣಿಕೆ ಸಂಗ್ರಹ ಕೇಂದ್ರವನ್ನು ಶ್ರೀರಾಮ್ ಹೋಟೆಲ್ ಮಾಲಕರಾದ ಹರಿರಾವ್ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ
ದೇವಳದ ವ್ಯವ ಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರುಗುತ್ತು ದೊಡ್ಡಮನೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಜಿತ್ ಆಳ್ವ ಬೈಲು ಏತಮೊಗರುಗುತ್ತು,ಹೊರೆಕಾಣಿಕೆ ಸಮಿತಿ ಸಂಚಾಲಕ ರಮಾನಾಥ ಅತ್ತಾರ್, ಉದ್ಯಮಿ ರವಿರಾಜ್ ಆಚಾರ್, ಬಜಪೆ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ರೋಹಿತ್ ತಾರಿಕಂಬ್ಳ ಬೈಲುಬೀಡು ಅಶ್ವಿನ್ ಬಲ್ಲಾಳ್, ವ್ಯವಸ್ಥಾಪನಾ ಸಮಿತಿ ಸದಸ್ಯ ಸುಖೇಶ್ ಮಾಣ್ಯಾ, ಕರುಣಾಕರ ಆಳ್ವ ಅದ್ಯಪಾಡಿ ಗುತ್ತು, ಸುಕೇಶ್ ಶೆಟ್ಟಿ ಮುಂಡಾರುಗುತ್ತು, ರಿತೇಶ್ ಶೆಟ್ಟಿ, ಸತೀಶ್ ಶೆಟ್ಟಿ ತಳಕಲ, ಸುದರ್ಶನ್ ಕೈಯ, ದಿನೇಶ್ ಶೆಟ್ಟಿ ಚಿಕ್ಕ ಪರಾರಿ, ಭುಜಂಗ ಕುಲಾಲ್ ಅದ್ಯಪಾಡಿ, ಶಂಕರದಾಸ, ರವಿ ಆಳ್ವ ಹೊರೆ ಕಾಣಿಕೆ ಸಂಗ್ರಹ ಕೇಂದ್ರದ ಮುಖ್ಯ ನಿರ್ವಾ ಹಕ ಕೃಷ್ಣರಾಜ್ ಬಜಪೆ, ಶ್ರೀ ಆದಿನಾಥೇಶ್ವರ ದೇವಸ್ಥಾನದ ದೇವಸ್ಥಾನ ಸಮಿತಿಯ ಬ್ರಹ್ಮಕಲಶೋತ್ಸವ ಸಮಿತಿಯ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.