50 ನೇ ವರ್ಷದ ಸುವರ್ಣ ಸಂಭ್ರಮದಲ್ಲಿರುವ ಹತ್ತು ಸಮಸ್ತರ ಯಕ್ಷಗಾನ ಸೇವಾ ಸಮಿತಿ ಮೇಲೆಕ್ಕಾರು
Tuesday, February 18, 2025
ಎಕ್ಕಾರು:50 ನೇ ವರ್ಷದ ಸುವರ್ಣ ಸಂಭ್ರಮದಲ್ಲಿರುವ ಹತ್ತು ಸಮಸ್ತರ ಯಕ್ಷಗಾನ ಸೇವಾ ಸಮಿತಿ ಮೇಲೆಕ್ಕಾರು ಇದರ ವತಿಯಿಂದ ಇಂದು ಮತ್ತು ನಾಳೆ ಯಕ್ಷಗಾನ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮೇಲೆಕ್ಕಾರು ಶಾನುಭೋಗರ ಬಾಕಿಮಾರು ಗದ್ದೆಯಲ್ಲಿ ನಡೆಯಲಿದೆ.ಇಂದು
ಫೆ.18ರಂದು ಬೆಳಗ್ಗೆ ಗಣಪತಿಹೋಮ, ಸತ್ಯನಾರಾಯಣ ಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ. ಊರಿನ ಹಿರಿಯರಿಗೆ ಗೌರವಾರ್ಪಣೆ,ವಿಟ್ಠಲ್ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ಸಂಜೆ 4ರಿಂದ ಮಕ್ಕಳ ಯಕ್ಷಗಾನ ತರಣಿ ಸೇನ. ಸಂಜೆ 5.30ರಿಂದ ಪ್ರಶಂಸ ಕಾಪು ತಂಡದವರಿಂದ ಬಲೆ ತೆಲಿಪುಲೆ. ಸಂಜೆ 7ರಿಂದ ಸಭಾ ಕಾರ್ಯಕ್ರಮ. ರಾತ್ರಿ 9ರಿಂದ ಪುದರ್ ದೀತಿಜಿ ನಾಟಕ ಪ್ರದರ್ಶನಗೊಳ್ಲಿದೆ.ನಾಳೆ( ಫೆ.19)ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮ್ಯೆ ಬಯಲಾಟ ನಡೆಯಲಿದೆ. ಈ ಸಂದರ್ಭದಲ್ಲಿ ಸೇವಾ ಸಮಿತಿಯಿಂದ ಬೆಳ್ಳಿ ಕಿರೀಟ ಸಮರ್ಪಣೆ ಸಮಾರಂಭನಡೆಯಲಿದೆ.
ಅಂದು ಬೆಳಗ್ಗೆ ಪೆರ್ಮುದೆ ಪೇಟೆಯಿಂದ ದೇವರ ಮೆರವಣಿಗೆ, ಸಂಘದಲ್ಲಿ ದೇವರ ಪೂಜೆ, ಭಜನ ಸೇವೆ, ಬೆಳಿಗ್ಗೆ 10.30ರಿಂದ ನೃತ್ಯ ವೈಭವ, 11.30ರಿಂದ ಸ್ಥಳೀಯ ಪ್ರತಿಭೆಗಳಿಂದ ಪ್ರತಿಭಾ ಪ್ರದರ್ಶನ, ಅನ್ನಸಂತರ್ಪಣೆ, ಮಧ್ಯಾಹ್ನ 1ರಿಂದ ಯಕ್ಷಗಾನ ನಾಟ್ಯ ವೈಭವ, ಸಂಜೆ 4ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6.15ರಿಂದ ಚೌಕಿ ಪೂಜೆ, 7.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.