-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕಾಪು ಬ್ರಹ್ಮಕಲಶೋತ್ಸವಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಬೃಹತ್ ಹೊರೆಕಾಣಿಕೆ

ಕಾಪು ಬ್ರಹ್ಮಕಲಶೋತ್ಸವಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಬೃಹತ್ ಹೊರೆಕಾಣಿಕೆ

 ಮೂಲ್ಕಿ : ಕಾಪು ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹಸಿರುಹೊರೆ ಕಾಣಿಕೆಯನ್ನು ಸಮಸ್ತ  ಬಂಟರ ವತಿಯಿಂದ ನೀಡಲಾಗುವುದು ಎಂದು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಮುಂಬೈಯ ಜಾಗತಿಕ ಬಂಟರ ಸಂಘದ ಅನೇಕ ಪದಾಧಿಕಾರಿಗಳು, ದಾನಿಗಳು ಮಾರಿಯಮ್ಮ ದೇವಸ್ಥಾನಕ್ಕೆ ಅನೇಕ ದೇಣಿಗೆ ಕೊಡುಗೆಗಳನ್ನು ನೀಡಿದ್ದಾರೆ ಎನ್ನಲು ಖುಷಿಯಾಗುತ್ತದೆ. 

ಹೊರೆಕಾಣಿಕೆ ಸಮಿತಿಯ ಅಧ್ಯಕ್ಷ  ಐಕಳ ದೇವೀಪ್ರಸಾದ ಶೆಟ್ಟಿ 
ಮಾತನಾಡಿ  ಮಾರ್ಚ್ 25ರಿಂದ ಒಂಭತ್ತು ದಿನಗಳ ಕಾಲ ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದೆ. 
ಅನೇಕ ದೇವಸ್ಥಾನಗಳ ಬ್ರಹ್ಮಕಲಶೋತ್ಸವಗಳಲ್ಲಿ ತೊಡಗಿಸಿಕೊಂಡ ಐಕಳ ಹರೀಶ ಶೆಟ್ಟರ ಮುತುವರ್ಜಿಯಲ್ಲಿ ಹೊರೆಕಾಣಿಕೆ ಬಂಟರ ಸಂಘಗಳ ಒಕ್ಕೂಟದಿಂದ ಹೊರೆಕಾಣಿಕೆ ಬರಲಿದೆ. ಮುಂಬೈ ಹಾಗೂ ನಾನಾ ಕಡೆಗಳ ಊರ ದಾನಿಗಳ ಸಹಕಾರದಲ್ಲಿ 99 ಕೋಟಿ ರೂಪಾಯಿಯಲ್ಲಿ ದೇಗುಲ ನಿರ್ಮಾಣ ಅತ್ಯಂತ ಸುಂದರವಾಗಿ ಆಗಿದೆ. ಮೂಲ್ಕಿಯ ಒಕ್ಕೂಟದ ಕಚೇರಿಗೆ ಹೊರೆಕಾಣಿಕೆ ನೀಡುವವರು ತಲುಪಿಸಬಹುದು ಎಂದು ಹೇಳಿದರು. ತಾ. 22 ಕ್ಕೆ ದಕ್ಷಿಣ ಕನ್ನಡದಿಂದ ತಾ. 23 ಕ್ಕೆ ಉಡುಪಿ ಜಿಲ್ಲೆಯಿಂದ ಹೊರೆಕಾಣಿಕೆ ಬರಲಿದೆ. 
ಎಲ್ಲ ಬಂಟ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳನ್ನು ಸಂಪರ್ಕಿಸಿ ಸಂಘಟಿಸಲಾಗಿದೆ ಎಂದು ಮಾಹಿತಿ ನೀಡಿದರು. 
99999 ಭಕ್ತರು ಸೇರಿ ನವದುರ್ಗಾ ಲೇಖನದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ಎಲ್ಲ ಬಂಟರ ಸಂಘಗಳನ್ನು ಸಂಪರ್ಕಿಸಲಾಗಿದೆ. ಸ್ವಸ್ತಿಕ್ ಬ್ರಾಂಡ್ ಅಕ್ಕಿಯನ್ನೇ ನೀಡಬೇಕು ಎಂದು ವಿನಂತಿಸಲಾಗಿದೆ. ಹೆಚ್ಚು ಸಮಯ ಉಳಿಯುವ ತರಕಾರಿಗಳನ್ನು ನೀಡಬೇಕು. ತೆಂಗಿನ ಕಾಯಿ ಕೂಡ ಇತ್ಯಾದಿ ಯಾವ ರೀತಿಯಲ್ಲಿ ಹೊರೆಕಾಣಿಕೆ ನೀಡಬೇಕು ಎಂದು ಮಾಹಿತಿ  ನೀಡಲಾಗಿದೆ.  150 ಕ್ಕೂ ಹೆಚ್ಚಿನ ಬಂಟರ ಸಂಘಗಳು ಹೊರೆಕಾಣಿಕೆಯಲ್ಲಿ ಭಾಗವಹಿಸಲಿವೆ ಎಂದು ಚಂದ್ರಹಾಸ ಶೆಟ್ಟಿ ಮಾಹಿತಿ ನೀಡಿದರು. ಅನ್ನಸಂತರ್ಪಣೆಗೆ 
ಪಾತ್ರೆಗಳನ್ನೂ ನೀಡಬಹುದು.
ಎಂದು ಮಾಹಿತಿನೀಡಿದರು.
 ಜಾಗತಿಕ ಬಂಟರ ಸಂಘದ ಕಾರ್ಯದರ್ಶಿ  ಇಂದ್ರಾಳಿ ಜಯಕರ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಶಶಿಧರ ಶೆಟ್ಟಿ, ಹೊರೆಕಾಣಿಕೆ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಮೂಲ್ಕಿ‌ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಮಾಜಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕೊಶಾಧಿಕಾರಿ  ಸ್ವರಾಜ್ ಶೆಟ್ಟಿ 
ಕಾರ್ಯದರ್ಶಿ ಸಾಯಿನಾಥ ಶೆಟ್ಟಿ,  ಬಾಳ ಜಗನ್ನಾಥ ಶೆಟ್ಟಿ, ಕೊಲ್ಲಾಡಿ ಬಾಲಕೃಷ್ಣ ರೈ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ