ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಶ್ರೇಯಸ್ಸನ್ನು ಸಾಧಿಸಲಿ - ವಿಜಯ ಅಶೋಕ ದೋಟಿಹಾಳ
Tuesday, February 11, 2025
ಬಜಪೆ:ತಂತ್ರಜ್ಞಾನ ಆಧಾರಿತ ಕಲಿಕೆಗೆ ಪೂರಕವಾಗುದರ ಜೊತೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಶ್ರೇಯಸ್ಸನ್ನು ಸಾಧಿಸಲಿ ಎಂದು ಮಂಗಳೂರಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ವಿಜಯ ಅಶೋಕ ದೋಟಿಹಾಳ ಹೇಳಿದರು.ಅವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನ ಸಿ ಆರ್ ಸಿ ವತಿಯಿಂದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನ ಕಟೀಲು ಶಾಖೆ ವತಿಯಿಂದ ಮಂಗಳೂರು ತಾಲೂಕಿನ ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆ ಗೆ ಎರಡು ಕಂಪ್ಯೂಟರ್ ಹಾಗೂ 2023 -24 ನೇ ಸಾಲಿನಲ್ಲಿ 8 ,9 ಹಾಗೂ 10ನೇ ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೂವರು ವಿದ್ಯಾರ್ಥಿಗಳಿಗೆ ತಲಾ 5,000 ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೆ .ವಿ. ಜಿ ಬ್ಯಾಂಕ್ ಕಟೀಲು ಶಾಖೆಯ ವ್ಯವಸ್ಥಾಪಕ ಭರತ್ ಬಿ. ಯು, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಇಂದಿರಾ ಎನ್ ರಾವ್,ಶಿಕ್ಷಕರಾದ ಶ್ರೀಮತಿ ರಾಜಶ್ರೀ, ಶ್ರೀಮತಿ ವಿದ್ಯಾ ಗೌರಿ ಶ್ರೀಮತಿ ವಿದ್ಯಾಲತಾ,ಶ್ರೀಮತಿ ವಿನ್ನಿ ನಿರ್ಮಲ ಡಿ ಸೋಜ, ಡಾ. ಅನಿತ್ ಕುಮಾರ್ ಉಪಸ್ಥಿತರಿದ್ದರು. ಶ್ರೀಮತಿ ಚಿತ್ರಶ್ರೀ ಕಾರ್ಯಕ್ರಮ ನಿರೂಪಿಸಿದರು.