ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ನೂತನ ಕೊಠಡಿಯ ಉದ್ಘಾಟನೆ
Tuesday, February 11, 2025
ಮೂಲ್ಕಿ: ಭಜನಾ ಮಂದಿರದ ಮೂಲಕ ಧಾರ್ಮಿಕ ಚಿಂತನೆಯೊಂದಿಗೆ ಸಮಾಜದ ಸ್ಪಂದನೆ ನಡೆಯುತ್ತಿದೆ, ಸಮಾಜದ ಎಲ್ಲಾ ವರ್ಗದವರ ಧಾರ್ಮಿಕತೆಯ ಆಧಾರ ಸ್ತಂಂಭವಾಗಿರುವ ಮಂದಿರಗಳು ನಿರಂತರವಾಗಿ ಸಾಮಾಜಿಕ ಕಾರ್ಯವನ್ನು ಕೈಗೊಳ್ಳಬೇಕು ಎಂದು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಪುನರೂರು ಹೇಳಿದರು.
ಅವರು ಮೂಲ್ಕಿ ಬಳಿಯ ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೊಠಡಿಯನ್ನು ಲೋಕರ್ಪಣೆಗೊಳಿಸಿ ಮಾತನಾಡಿದರು.
ಮಂದಿರದ ಅಧ್ಯಕ್ಷ ಅನಂತ ಪದ್ಮನಾಭ ಶೆಟ್ಟಿಗಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಜಪೆ ಟ್ರಸ್ಟ್‌ನ ಯೋಜನಾಧಿಕಾರಿ ಗಿರೀಶ್ ಕೆ., ಎನ್‌ಐಟಿಕೆಯ ಡಾ. ಶ್ರೀಕಾಂತ್ ರಾವ್ ಸಸಿಹಿತ್ಲು, ಕಿಲ್ಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದಮಯಂತಿ ಶೆಟ್ಟಿಗಾರ್, ಜಯರಾಮ್ ಅಂಗರಗುಡ್ಡೆ, ಸೇವಾ ಪ್ರತಿನಿಧಿ ರೇಖಾ, ಅರ್ಚಕ ರಾಘವೇಂದ್ರ ರಾವ್, ಮೂಲ್ಕಿ ಎಲ್‌ಐಸಿ ಶಾಖಾ ಪ್ರಬಂಧಕ ಪ್ರಕಾಶ್ ಆಚಾರ್ಯ, ಟಿ.ಎನ್.ರವೀಂದ್ರನ್, ಮಾಧವ ಶೆಟ್ಟಿಗಾರ್, ಉಷಾ ಪ್ರಕಾಶ್, ಸುರೇಖಾ, ಕರುಣಾಕರ, ಸಂದೀಪ್, ಶಿವಾನಂದ ಕೋಟ್ಯಾನ್, ಸೌಮ್ಯ ರಾವ್, ರತ್ನಾ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಚೇತನ್ ಪುನರೂರು ಸ್ವಾಗತಿಸಿದರು, ಸತೀಶ್ ವಂದಿಸಿದರು, ರಾಜೇಶ್ ಪಿ.ಆರ್. ಕಾರ್ಯಕ್ರಮ ನಿರೂಪಿಸಿದರು.
-೦-