-->


ಚಾಕಲೇಟ್ ನೀಡಿ ಶಾಲಾ ಮಕ್ಕಳ ಕಿಡ್ನ್ಯಾಪ್ ಗೆ ಯತ್ನ ದೂರು ದಾಖಲು

ಚಾಕಲೇಟ್ ನೀಡಿ ಶಾಲಾ ಮಕ್ಕಳ ಕಿಡ್ನ್ಯಾಪ್ ಗೆ ಯತ್ನ ದೂರು ದಾಖಲು

ಮುಲ್ಕಿ: ಚಾಕಲೇಟ್ ಆಸೆ ತೋರಿಸಿ ಶಾಲಾ ಮಕ್ಕಳನ್ನೇ  ಕಿಡ್ನ್ಯಾಪ್ ಮಾಡಲು  ದುಷ್ಕರ್ಮಿಗಳ ತಂಡ ಯತ್ನ ನಡೆಸಿದ ಘಟನೆ ಮೂಲ್ಕಿಯಲ್ಲಿ ನಡೆದಿದೆ. ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಶಾಲಾ ಮಕ್ಕಳನ್ನು ಕಿಡ್ನಾಪ್ ಮಾಡಲು ಕಾರಿನಲ್ಲಿ ಆಗಮಿಸಿದ ದುಷ್ಕರ್ಮಿಗಳ ತಂಡ  ಯತ್ನಿಸಿದ್ದು ಮಕ್ಕಳ ಧೈರ್ಯ ಕಂಡು ಸ್ಥಳದಿಂದ ಪರಾರಿಯಾಗಿದ ಬಗ್ಗೆ ತಡವಾಗಿ ವರದಿಯಾಗಿದೆ 

ಶಾಲಾ ಮಕ್ಕಳನ್ನು ಕಿಡ್ನ್ಯಾಪ್ ಮಾಡಲು ಕಾರಿನಲ್ಲಿ ಬಂದ ತಂಡ  ಶಾಲೆ ಬಿಡುವಾಗ ಮಕ್ಕಳಿಗೆ ಚಾಕೊಲೇಟ್ ಆಸೆ ತೋರಿಸಿ ಕಾರಿನಲ್ಲಿ ಕುಳಿತುಕೊಳ್ಳಲು ಹೇಳಿದ್ದಾರೆ
. ಇದಕ್ಕೆ ಮಕ್ಕಳು ಬಗ್ಗಲಿಲ್ಲ ಕೂಡಲೇ ತಂಡದಲ್ಲಿ ಒಬ್ಬ ಚಾಕು ತೋರಿಸಿದಾಗ ಕೂಡಲೇ ಮಕ್ಕಳು ಧೈರ್ಯದಿಂದ ಶಾಲೆಗೆ ಓಡಿ ಹೋಗಿ ಶಾಲಾ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. 
ಶಾಲಾ ಪ್ರಾಂಶುಪಾಲರು ಸಹಿತ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ದುಷ್ಕರ್ಮಿಗಳ ತಂಡ ಸ್ಥಳದಿಂದ ಪರಾರಿಯಾಗಿದೆ
 ಮಕ್ಕಳ ಧೈರ್ಯಕ್ಕೆ ಮೆಚ್ಚಿದ್ದು ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚುವಂತೆ  ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದುಷ್ಕರ್ಮಿಗಳು ಆಗಮಿಸಿದ ಕಾರಿನಲ್ಲಿ ಮಧ್ಯದ ಬಾಟಲ್ ಗಳನ್ನು ಮಕ್ಕಳು  ನೋಡಿದ್ದು ಪೊಲೀಸರು ಶಾಲಾ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಶಾಲಾ ಮಕ್ಕಳ ಕಿಡ್ನ್ಯಾಪ್ ಗೆ ಯತ್ನಿಸಿದ ಬಗ್ಗೆ ಪೋಷಕರಲ್ಲಿ ಆತಂಕ ಉಂಟಾಗಿದ್ದು ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಅಗ್ರಹಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article