ಕಾರ್ನಾಡ್ ಹರಿಹರ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕದ ವಿಜೃಂಭಣೆಯ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ
Wednesday, February 12, 2025
ಮುಲ್ಕಿ: ಸುಮಾರು 600 ವರ್ಷಗಳ ಇತಿಹಾಸವಿರುವ ಮುಲ್ಕಿ ಸೀಮೆಯ ಇತಿಹಾಸ ಪ್ರಸಿದ್ಧ ಕಾರ್ನಾಡ್ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವರಿಗೆ ಫೆ .12 ರಿಂದ 17ರ ವರೆಗೆ ನಡೆಯಲಿದ್ದು ಪೂರ್ವಭಾವಿಯಾಗಿ
ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ಹಾಗೂ ಅರ್ಚಕ ಹಯಗ್ರೀವ ಪಡ್ಡಿಲ್ಲಾಯ ನೇತೃತ್ವದಲ್ಲಿ ತೋರಣ ಮುಹೂರ್ತ ಉಗ್ರಾಣ ಮುಹೂರ್ತ ನಡೆಯಿತು
ಬುಧವಾರ ಬೆಳಿಗ್ಗೆ 9:30ಕ್ಕೆ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದು ತೋರಣ ಮುಹೂರ್ತ ನಡೆಯಿತು.
ಬಳಿಕ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ವಾಸುದೇವ ಭಟ್ ರವರು ವಿಶೇಷ ಪ್ರಾರ್ಥನೆ ನಡೆಸಿ ಉಗ್ರಾಣ ಮುಹೂರ್ತ , ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು
ಕ.ಸಾ.ಪ.ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು,ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ದೇವಸ್ಥಾನದ ಧರ್ಮದರ್ಶಿ ಯಾಜೀ ಡಾ. ಎಚ್ ನಿರಂಜನ ಭಟ್,ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಕಿನ್ನಿಗೋಳಿ ದೀಪ ಪ್ರಜ್ವಲನೆ ಮೂಲಕ ಉಗ್ರಾಣ ಮುಹೂರ್ತ ನೆರವೇರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಎಂ.ಎಚ್ ಅರವಿಂದ ಪೂಂಜಾ, ಅಶ್ವಿನಿ ಪೂಂಜಾ, ಆದಿತ್ಯ ಪೂಂಜಾ, ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಸುನಿಲ್ ಆಳ್ವ, ಸುರೇಶ್ ರಾವ್, ವೈ ಎನ್ ಸಾಲ್ಯಾನ್, ಶಶೀoದ್ರ ಸಾಲ್ಯಾನ್, ರವಿಕುಮಾರ್, ರಾಘವೇಂದ್ರ ಭಟ್, ಕೃಷ್ಣ ಶೆಟ್ಟಿ, ಜೀವನ್ ಶೆಟ್ಟಿ, ನೂತನ್ ಶೆಟ್ಟಿ, ಹರ್ಷರಾಜ ಶೆಟ್ಟಿ, ನಾಗೇಶ್ ಬಪ್ಪನಾಡು,ಪ್ರವೀಣ್ ವಿ ಕೋಟ್ಯಾನ್, ಕಿಶೋರ್ ಹರಿಹರ, ಶಿವರಾಮ್ ಜಿ ಅಮೀನ್ ಮತ್ತಿತರರು ಉಪಸ್ಥಿತರಿದ್ದರು