ಕಟೀಲನಲ್ಲಿ ನಂದಿನಿ ಅವತರಣ ದಿನ
Wednesday, February 12, 2025
ಬರದಿಂದ ಕಂಗೆಟ್ಟ ಭುವಿಗಿಳಿದು ಕ್ಷಾಮ ಕಳೆಯಬೇಕೆಂದು ಕೇಳಿಕೊಂಡಾಗ ಒಪ್ಪದ ಕಾಮಧೇನುವಿನ ಮಗಳು ನಂದನಿಗೆ ನದಿಯಾಗಿ ಹರಿ ಎಂದು ಮುನಿ ಜಾಬಾಲಿ ಶಪಿಸಿದರು.
ಪಶ್ಚಾತ್ತಾಪದಿಂದ ಕಂಗೆಟ್ಟ ನಂದಿನಿ, ದುರ್ಗೆಯನ್ನು ಸ್ತುತಿಸಿದಾಗ ನಿನ್ನ ಕಟಿಯಲ್ಲಿ ಮಗಳಾಗಿ ಜನಿಸಿ ನೆಲೆಸುವೆ ಎಂದು ಅಭಯವಿತ್ತಳು ಜಗನ್ಮಾತೆ.
ಅದರಂತೆ ಹುಟ್ಟಿ ಹರಿದ ನಂದಿನಿಯಲ್ಲಿ ಕಟಿ ಕಟೀಲಿನಲ್ಲಿ ನೆಲೆಯಾದಳು ಭ್ರಮರಾಂಬೆ.
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಂದಿನಿ ಅವತರಣ ದಿನವನ್ನು ಶ್ರೀ ದೇವರಿಗೆ ವಿಶೇಷ ಪೂಜಾರಾಧನೆಗಳ ಮೂಲಕ ಆಚರಿಸಲಾಯಿತು.
ಕ್ಷೀರಾಭಿಷೇಕ ಸೀಯಾಳಾಭಿಷೇಕ ಹಾಲುಪಾಯಸ ಅರ್ಪಣೆಯ ಮೂಲಕ ಆರಾಧಿಸಲಾಯಿತು.
ವಿದ್ವಾನ್ ಎಂ. ನಾರಾಯಣ ಮತ್ತು ಶಿಷ್ಯರಿಂದ ಸಂಗೀತಾರ್ಚನೆ ನಡೆಯಿತು.
ಅನೇಕ ಭಕ್ತರು ನಂದಿನಿ ನದಿಯಲ್ಲಿ ಮಿಂದು ಧನ್ಯರಾದರು.