ಸುಮಾರು 65 ಲ.ರೂ ವೆಚ್ಚದಲ್ಲಿ ನೂತನವಾಗಿನಿರ್ಮಾಣವಾಗಲಿರುವ ಗ್ರಾಮ ಆರೋಗ್ಯ ಮತ್ತು ಕ್ಷೇಮ ಕೇಂದ್ರ ತೆಂಕ ಎಕ್ಕಾರು ಇದರ ನೂತನ ಕಟ್ಟಡಕ್ಕೆ ಶಿಲಾನ್ಯಾಸ
Tuesday, February 25, 2025
ಎಕ್ಕಾರು:ಜಿಲ್ಲಾ ಪಂಚಾಯತ್ ನ 15 ನೇ ಹಣಕಾಸು ಯೋಜನೆಯಡಿ ಸುಮಾರು 65 ಲ.ರೂ ವೆಚ್ಚದಲ್ಲಿ ನೂತನವಾಗಿನಿರ್ಮಾಣವಾಗಲಿರುವ ಗ್ರಾಮ ಆರೋಗ್ಯ ಮತ್ತು ಕ್ಷೇಮ ಕೇಂದ್ರ ತೆಂಕ ಎಕ್ಕಾರು ಇದರ ನೂತನ ಕಟ್ಟಡಕ್ಕೆ ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೊಟ್ಯಾನ್ ಅವರು ಮಂಗಳವಾರದಂದು ಶಿಲಾನ್ಯಾಸವನ್ನು ನೆರವೇರಿಸಿದರು.ಡಾ.ಪದ್ಮನಾಭ ಭಟ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಈ ಸಂದರ್ಭ ಎಕ್ಕಾರು ಗ್ರಾಮ ಪಂಚಾಯತ್ ನ ಅಧ್ಯಕ್ಷ ಪ್ರವೀಣ್ ಆಚಾರ್ಯ,ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಂದ್ರ, ಕಾರ್ಯದರ್ಶಿ ಕಮಲಾಕ್ಷ ಎನ್ ,ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾಸ್ಕರ ಕೋಟ್ಯಾನ್ ,ಗುತ್ತಿಗೆದಾರ ರಾಜೇಶ್,ಪಂಚಾಯತ್ ಸದಸ್ಯರುಗಳಾದ ಸತೀಶ್ ಶೆಟ್ಟಿ,ವಿಕ್ರಮ್ ಮಾಡ,ಸುದೀಪ್ ಅಮೀನ್ ,ಸುರೇಖಾ ಶೆಟ್ಟಿ,ಸುಜಾತ ಕೆ,ಮೊಯಿದಿನ್ ಖಾನ್,ಜಾನಕಿ,ಅಂಗನವಾಡಿ ಶಿಕ್ಷಕಿ ಶೋಭಾ,ಸ್ಥಳೀಯರಾದ ರಿತೇಶ್ ಶೆಟ್ಟಿ,ದಿನೇಶ್ ಕುಕ್ಯಾನ್ ,ದೀಪಕ್ ಪೂಜಾರಿ ,ಶಿವಪ್ರಸಾದ್,ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.