ಮಳಲಿ ಮಟ್ಟಿ ಜೋಗಿಮಠ ಶ್ರೀ ಕಾಲಬೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಆರಂಭ
Tuesday, February 25, 2025
ಕೈಕಂಬ:ಮಳಲಿ ಮಟ್ಟಿ ಜೋಗಿಮಠ ಶ್ರೀ ಕಾಲಬೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯು ಫೆ.24 ರಿಂದ ಫೆ.27 ರ ತನಕ ವಿಜೃಂಭಣೆಯಿಂದ ನಡೆಯಲಿದ್ದು, ಕದ್ರಿ ಜೋಗಿ ಮಠದ ಶ್ರೀ ಯೋಗಿರಾಜ ನಿರ್ಮಲನಾಥ್ ಮಹಾರಾಜ್ ಅವರ ಆಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ದೇರೆಬೈಲು ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ಉಮೇಶ್ ನಾಥ್ ಕದ್ರಿಯವರ ಉಪಸ್ಥಿತಿಯಲ್ಲಿ ಸೋಮವಾರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ಬೆಳಿಗ್ಗೆ 7ಕ್ಕೆ ಪ್ರಾತಃಕಾಲ ಪೂಜೆ, ಬಳಿಕ ಶತರುದ್ರಾಭಿಷೇಕ ಹಾಗೂ ಮಹಾ ರುದ್ರಯಾಗ ನಡೆದು 12ಕ್ಕೆ ಪೂರ್ಣಾಹುತಿ ನೀಡಲಾಯಿತು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆಜರಗಿತು.
ಮಧ್ಯಾಹ್ನ ಶ್ರೀಬ್ರಹ್ಮಲಿಂಗೇಶ್ವರ ಯಕ್ಷಗಾನ ಮಂಡಳಿ, ಮಳಲಿ ಅವರಿಂದ ದಕ್ಷಯಜ್ಞ ಎಂಬ ಯಕ್ಷಗಾನ ತಾಳಮದ್ದಳೆ, ಸಂಜೆ 5ರಿಂದ ಶ್ರೀ ಕಾಲಭೈರವ ಮಂಜುನಾಥೇಶ್ವರ ಮಕ್ಕಳ ಭಜನಾ ಮಂಡಳಿ ಮಟ್ಟಿ ಮತ್ತು ಶ್ರೀ ಕಾಲಭೈರವ ಮಂಜುನಾಥೇಶ್ವರ ಭಜನಾ ಮಂಡಳಿ ಮಟ್ಟಿ ಇವರಿಂದ
ಭಜನಾ ಸಂಕೀರ್ತನೆ. ರಾತ್ರಿ 7 ಗಂಟೆಗೆ ರಂಗಪೂಜೆ, ಬಳಿಕ ಮಹಾಪೂಜೆ, ಉತ್ಸವಬಲಿ, ಬಟ್ಟಲು ಕಾಣಿಕೆ,ಕಲ್ಲುರ್ಟಿ ದೈವದ ನೂತನ ಬಿಂಬ ಪ್ರತಿಷ್ಠಾಪನೆ,ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಧಾನ ಅರ್ಚಕ ಉಮೇಶ್ ನಾಥ್ ಕದ್ರಿ, ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ ಜೋಗಿ ಮಟ್ಟಿ ಗೌರವ ಸಲಹೆಗಾರ ಶೇಖರ ಜೋಗಿ, ಗೌರವಾಧ್ಯಕ್ಷ ವಿಶ್ವನಾಥ ಕರ್ಕೇರ ಮಟ್ಟಿ ನಾಗೇಶ್ ಜೋಗಿ ಕಿನ್ನಿಕಂಬಳ,ಗೋಪಾಲ ಪೂಜಾರಿ ಅರ್ಬಿ, ಉಪಾಧ್ಯಕ್ಷರಾದ ಸೀತಾರಾಮ್ ಜೋಗಿ ಮಟ್ಟಿ ,ವಸಂತ ಪೂಜಾರಿ ಮಟ್ಟಿ ,ಸಚಿನ್ ಸಾಲ್ಯಾನ್ ಮಟ್ಟಿ, ಹರೀಶ್ ಜೋಗಿ ಮಟ್ಟಿ ,ಕಾರ ದರ್ಶಿ ಹರೀಶ್ ಮಟ್ಟಿ ಕೋಶಾಧಿ ಕಾರಿ ದಿನೇಶ್ ಕುಮಾರ್ ಮಟ್ಟಿ ಮತ್ತು
ಆಡಳಿತ ಮಂಡಳಿಯ ಸದಸ್ಯರು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಭಕ್ತರು ಇದ್ದರು.
ಗಂಗಾಧರ್ ಜೋಗಿ ಮತ್ತು ಮನೀಶ್ ಜೋಗಿಯವರಿಂದ ಶ್ರೀ ದೇವರಿಗೆ ಬೆಳ್ಳಿ ಖಚಿತವಾದ ಹಸಿರುಕೊಡೆ, ಭೈರವ ನಾಸಿಕ್ ಮಟ್ಟಿಕೈಕಂಬ ಮತ್ತು ಗಂಗಾಧರ್ ಜೋಗಿ, ವೇದಾ ಗಂಗಾಧರ್ ಜೋಗಿ ಹಾಗೂ ಮನೀಶ್ ಜೋಗಿ, ವಿನೀಶ್ ಜೋಗಿಯಾವರಿಂದ ಶ್ರೀ ದೇವರ ಉತ್ಸವ ಮೂರ್ತಿಗೆ ಬೆಳ್ಳಿಯ ಪ್ರಭಾವಳಿ, ಸುಶ್ಮಿತಾ ಕಿಶೋರ್ ಮತ್ತು ಮಕ್ಕಳು ಕೊಳ್ಳಮೊಗರು ಮತ್ತು ಶ್ಯಾಮಲಾ ರಾಮಚಂದ್ರ ಜೋಗಿ ಮತ್ತು ಮಕ್ಕಳು ಮಟ್ಟಿ ಕೈಕಂಬ ಇವರಿಂದ ಎರಡು ಚಾಮರ ಮತ್ತು ಆಶೀಷ್ ದಾಸ್ ಕುಕ್ಕುರಿ ಮಳಲಿ ಇವರಿಂದ ಧೂಮಾವತಿ ದೈವಕ್ಕೆ ಬೆಳ್ಳಿಯ ಖಡಲೆ ಮತ್ತು ಸೊಂಟ ಪಟ್ಟಿಯನ್ನು ಸಮರ್ಪಸಲಾಯಿತು.