-->


ದಕ್ಷಿಣ ಕನ್ನಡ ಮುಸ್ಲಿಂ ಜನಪ್ರತಿನಿಧಿಗಳ ಒಕ್ಕೂಟ" ನೂತನ ಸಂಘಟನೆ  ಅಸ್ತಿತ್ವಕ್ಕೆ ,ಅಧ್ಯಕ್ಷರಾಗಿ ಸಿರಾಜ್ ಬಜ್ಪೆ ಆಯ್ಕೆ

ದಕ್ಷಿಣ ಕನ್ನಡ ಮುಸ್ಲಿಂ ಜನಪ್ರತಿನಿಧಿಗಳ ಒಕ್ಕೂಟ" ನೂತನ ಸಂಘಟನೆ ಅಸ್ತಿತ್ವಕ್ಕೆ ,ಅಧ್ಯಕ್ಷರಾಗಿ ಸಿರಾಜ್ ಬಜ್ಪೆ ಆಯ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇರುವ ಮುಸ್ಲಿಂ ಸಮುದಾಯದ ಜನಪ್ರತಿನಿಧಿಗಳನ್ನು ಒಗ್ಗೂಡಿಸಿಕೊಂಡ "ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ" ನೂತನ ಸಂಘಟನೆಯು ಫೆ.24ರಂದು ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ  ನಡೆದ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.

ಪ್ರಥಮ ಹಂತದಲ್ಲಿ 252 ಸದಸ್ಯರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸಿರಾಜ್ ಬಜ್ಪೆ, ಉಪಾಧ್ಯಕ್ಷರಾಗಿ ಹಾಜಿರಾ ಗಫೂರ ಕಲ್ಮಡ್ಕ ಸುಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಸಜಿಪನಡು ಅವರನ್ನು ಸಭೆಯು ಸರ್ವನಾಮತದಿಂದ ಆಯ್ಕೆಮಾಡಿತು.

ಅಲ್ಲದೆ ಮುಂದಿನ ಸಭೆಯಲ್ಲಿ ಉಳಿದ ಪದಾಧಿಕಾರಿಗಳ ಆಯ್ಕೆ ಮತ್ತು ಇನ್ನಷ್ಟು ಸದಸ್ಯರನ್ನು ಸೇರ್ಪಡೆಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದು, ನಿರ್ಣಯವನ್ನು ಅಂಗೀಕರಿಸಲಾಯಿತು. 

ಎಂ. ಹನೀಫ್ ಕೌಕ್ರಾಡಿ, ಅಬ್ದುಲ್ ರಝಾಕ್ ಅಡ್ಯಾರು, ಇಬ್ರಾಹಿಮ್ ಒಳವೂರು ತುಂಬೆ, ಅಬ್ದುಲ್ ಸತ್ತಾರ್ ಅಡ್ಯಾರು, ಇರ್ಫಾನ್ ಗಂಜಿಮಠ, ಸಾದಿಕ್ ಗಂಜಿಮಠ, ರಮೀಜ ಕುಕ್ಕಾಜೆ, ಅಬ್ದುಲ್ ಸಲಾಂ ಸೋಮೇಶ್ವರ, ಅಬ್ದುಲ್ ಲತೀಫ್ ಸಜೀಪ, ಫಾತಿಮಾ ಝೊಹರಾ ಕುಕ್ಕಾಜೆ, ರಹಮತುಲ್ಲಾ ವಗ್ಗ ಬಂಟ್ವಾಳ, ಅಬ್ದುಲ್ ಅಝೀಝ್ ಹಳೆಯಂಗಡಿ, ಅಬ್ದುಲ್ ಕರೀಂ ಬೆಳ್ತಂಗಡಿ ಮೊದಲಾದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article