-->


4.50 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಒಕೆ ಫ್ರೆಂಡ್ಸ್ ಸಹಕಾರದಲ್ಲಿ ನಿರ್ಮಿಸಲಾದ ಸುಸಜ್ಜಿತ ಬಸ್ ನಿಲ್ದಾಣ  ಉದ್ಘಾಟನೆ

4.50 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಒಕೆ ಫ್ರೆಂಡ್ಸ್ ಸಹಕಾರದಲ್ಲಿ ನಿರ್ಮಿಸಲಾದ ಸುಸಜ್ಜಿತ ಬಸ್ ನಿಲ್ದಾಣ ಉದ್ಘಾಟನೆ

ಸುರತ್ಕಲ್: ಲೋಕೇಶ್ ಬೊಳ್ಳಾಜೆ ಪ್ರತಿನಿಧಿಸುತ್ತಿರುವ ಮನಪಾ 3ನೇ ವಾರ್ಡ್‌ ನಲ್ಲಿ ಕಳೆದ 5 ವರ್ಷದಲ್ಲಿ 7 ಕೋಟಿ ರೂ. ಮಿಕ್ಕಿ ಅನುದಾನ ನೀಡಿದ್ದು ಉತ್ತಮ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಾಗಿದೆ. ಇದೀಗ ಜಲಸಿರಿ ಯೋಜನೆ ಜಾರಿಯಾದರೆ ದಿನದ 24 ಗಂಟೆ ನೀರಿನ ನವಲತ್ತು ಕೂಡ ದೊರಕಲಿದೆ ಎಂದರು ಶಾಸಕರಾದ ಡಾ. ಭರತ್ ಶೆಟ್ಟಿ ವೈ ಹೇಳಿದರು.

ಇಲ್ಲಿನ ಆದಿಶಕ್ತಿ ದುರ್ಗಾಪರಮೇಶ್ವರೀ ಕ್ಷೇತ್ರದ ಮುಂಭಾಗ ಲೋಕೇಶ್ ಬೊಳ್ಳಾಜೆ ಅವರ ಪಾಲಿಕೆ ನಿಧಿ 4.50 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಒಕೆ ಫ್ರೆಂಡ್ಸ್ ಸಹಕಾರದಲ್ಲಿ ನಿರ್ಮಿಸಲಾದ ಸುಸಜ್ಜಿತ ಬಸ್ ನಿಲ್ದಾಣ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾ ಸಮಸ್ಯೆ ಇದ್ದರೂ ಬಿಜೆಪಿ ಆಡಳಿತ ದೃತಿ ಗೆಡದೆ ಉತ್ತಮವಾಗಿ ನಿಭಾಯಿಸಿದೆ. ಆದರ ಜತೆಗೆ ಅಭಿವೃದ್ಧಿ ಕಾರ್ಯ ಎಲ್ಲೂ ನಿಲ್ಲದಂತೆ ಎಚ್ಚರಿಕೆ ವಹಿಸಲಾಗಿತ್ತು. ರಸ್ತೆ, ಒಳಚರಂಡಿ, ಮಳೆ ನೀರು ಹರಿಯುವ ತೋಡು, ಡಾಮರು ರಸ್ತೆ, ಸಹಿತ ವಿವಿಧ ಸವಲತ್ತು ಒದಗಿಸಲು ಆದ್ಯತೆ ನೀಡಿದ್ದೇವೆ ಎಂದರು."

ಸರಕಾರಕ್ಕೆ ಎಲ್ಲವನ್ನೂ ಮಾಡಲು ಸಾಧ್ಯವಾಗದೆ ಹೋದಾಗ ಸಂಘ ಸಂಸ್ಥೆಗಳು ಕೈ ಜೋಡಿಸಿ ಆರ್ಥಿಕ ಸಂಪ್ರಹ ಮಾಡಿ ಸ್ಥಳೀಯವಾಗಿ ಕೆಲಸವೊಂದು ಸೌಲಭ್ಯ ಒದಗಿಸಲು ಮುಂದಾಗುತ್ತಿರುವುದು ಉತ್ತಮ ಕಾರ್ಯವಾಗಿದೆ. ಒಕೆ ಫ್ರೆಂಡ್ಸ್ ಯುವಕ ತಂಡ ಉತ್ತಮ ಸಮಾಜ ಸೇವಾ ಕಾರ್ಯ ಮಾಡುತ್ತಾ ಬರುತ್ತಿದೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭ ಸ್ಥಳೀಯ ಮನಪಾ ಸದಸ್ಯರನ್ನು ಉತ್ತಮ ಸೇವಾ ಕಾರ್ಯಕ್ಕಾಗಿ ಶಾಸಕರು ಸಮ್ಮಾನಿಸಲಾಯಿತು.

ಮೇಯರ್ ಮನೋಜ್ ಕುಮಾರ್, 
ಮನಪಾ ಸದಸ್ಯೆ ಸರಿತ ಶಶಿಧ‌ರ್, ಉತ್ತರ ಮಂಡಲ ಸಹಕಾರ ಭಾರತಿ ಪ್ರಕೋಷ್ಟ ಅಧ್ಯಕ್ಷ ಅಶೋಕ್ ಶೆಟ್ಟಿ, ವಾರ್ಡ್ ಅಧ್ಯಕ್ಷ ಶಾಂತ ಕುಮಾ‌ರ್, ಉದ್ಯಮಿ ಪುರುಷೋತ್ತಮರ್‌ ಬಂಗೇರ, ಮೂಡಬಿದ್ರೆ ಉಪತಹಶೀಲ್ದಾ‌ರ್ ರಾಮ ಕೆ.. ಸುಧೀರ್, ಆದಿಶಕ್ತಿ ಕ್ಷೇತ್ರದ ಮೊಕ್ತೆ ಸರ ಪ್ರದೀಪ್ ಕುಲಾಲ್, ಗಿರೀಶ್, ಒಕೆ ಫ್ರೆಂಡ್ಸ್ ಅಧ್ಯಕ್ಷ ಉಮೇಶ್ ಪೂಜಾರಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. ಉತ್ತರ ಮಂಡಲ ಎಸ್ ಸಿ ಮೋರ್ಛಾ ವಿಭಾಗದ ಅಧ್ಯಕ್ಷ ಹರೀಶ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಗಣಪತಿ ಕಟ್ಟೆಯ ಉದ್ಘಾಟನೆ ನೆರವೇರಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article