-->


ಜ್ಞಾನಾರ್ಜನೆಯ ಆಸಕ್ತಿ ಇರುವವರಿಗೆ ಓದುವ ಆಸಕ್ತಿ ಸಹಜ  - ಡಾ. ರುಡಾಲ್ಫ್ ನೊರೊನ್ಹ

ಜ್ಞಾನಾರ್ಜನೆಯ ಆಸಕ್ತಿ ಇರುವವರಿಗೆ ಓದುವ ಆಸಕ್ತಿ ಸಹಜ - ಡಾ. ರುಡಾಲ್ಫ್ ನೊರೊನ್ಹ

 


ಮೂಲ್ಕಿ : ಜ್ಞಾನಾರ್ಜನೆಯ ಆಸಕ್ತಿ ಇರುವವರಿಗೆ ಓದುವ ಆಸಕ್ತಿ ಸಹಜ. ಆಧುನಿಕ ಕಾಲದ ಈ ಧಾವಂತದಲ್ಲಿ ಪುಸ್ತಕ ಓದುವುದು ಅಸಾಧ್ಯವಾಗಬಹುದು. ಸಮಯದ ಕೊರತೆ ಇರಬಹುದು. ಅಂತಹವರಿಗೆ ಕೇಳುವ ಅವಕಾಶಕ್ಕಾಗಿ ಆಡಿಬಲ್, ಯೂಟ್ಯೂಬ್, ಫೋಡ್ ಕಾಸ್ಟ್, ಆಡಿಯೋ ಬುಕ್, ವಾಚ್, ಮೊಬೈಲ್ ಫೋನ್ ಹೀಗೆ ತಂತ್ರಜ್ಞಾನದಿಂದ ಜ್ಞಾನವನ್ನು ಕೇಳಿಯೂ ಹೆಚ್ಚಿಸಿಕೊಳ್ಳುವ ವ್ಯವಸ್ಥೆಗಳು ಬಂದಿವೆ ಎಂದು ಡಾ. ರುಡಾಲ್ಫ್ ನೊರೊನ್ಹ ಹೇಳಿದರು.

ಐಕಳ ಪೊಂಪೈ ಕಾಲೇಜಿನಲ್ಲಿ ನಡೆದ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಾಮ್ಮೇಳನದಲ್ಲಿ ಓದುವ ಸೊಬಗು, ಕೇಳುವ ಸೊಗಸು ವಿಚಾರಗೋಷ್ಟಿಯಲ್ಲಿ ಮಾತನಾಡಿದರು.ಓದುವಾಗ ಗಮನ ಸಂಪೂರ್ಣ ಪುಸ್ತಕದಲ್ಲಿರಬೇಕು. ಸಾಹಿತ್ಯ ಕೇಳುವಾಗ ಹಾಗಲ್ಲ. ಕೆಲಸ ಮಾಡುತ್ತ ಮಾಡುತ್ತ ಕೇಳಬಹುದು. ವಾಹನ ಚಲಾಯಿಸುವಾಗಲೂ ಭಾಷಣ, ಉಪನ್ಯಾಸಗಳನ್ನು ಕೇಳುವ ಸುಖ ಚೆನ್ನಾಗಿರುತ್ತದೆ ಎಂದರು.
ವಿಶ್ವನಾಥ ಕೆ. ಕವತ್ತಾರು ಮಾತನಾಡಿ ಓದುವ ಪ್ರವೃತ್ತಿ ನಮ್ಮ ಜ್ಞಾನವನ್ನು, ಬೌದ್ಧಿಕ ಸಂವೇದನಾಶೀಲತೆಯನ್ನು ಹೆಚ್ಚಿಸುತ್ತದೆ ಎಂದರು. ಪಾಂಡುರಂಗ ಭಟ್ ಮಾತನಾಡಿ ಹೈಸ್ಕೂಲಿನಲ್ಲಿ ಪತ್ತೇದಾರಿಕೆ ಕಥೆಗಳನ್ನು ಓದುವ ಮೂಲಕ ಓದುವುದನ್ನು ಆರಂಭಿಸಿದೆ. ಆನಂದಕ್ಕೆ ಓದು ನಿಜ. ನಿದ್ದೆಗೂ ಓದುವಿಕೆ ಬೇಕು. ಭೈರಪ್ಪರ ಎಲ್ಲ ಪುಸ್ತಕಗಳನ್ನೂ ಓದಿದೆ. ಇತ್ತೀಚಿಗೆ ಅವರನ್ನು ಕಂಡು ಸಂಭ್ರಮಿಸಿದ್ದೇನೆ. ಓದುವ ಸುಖ ಓದಿದವರಿಗೇ ಗೊತ್ತು ಎಂದರು. ಡಾ. ಸೋಂದಾ ಭಾಸ್ಕರ ಭಟ್ ಸಮನ್ವಯದ ಮಾತುಗಳನ್ನಾಡಿದರು. ಕೆ.ಎ. ಅಬ್ದುಲ್ಲ, ಡೇನಿಯಲ್ ದೇವರಾಜ್, ಸಮ್ಮೇಳನಾಧ್ಯಕ್ಷ ಶ್ರೀಧರ ಡಿ.ಎಸ್. ಉಪಸ್ಥಿತರಿದ್ದರು. ಧನಲಕ್ಷ್ಮೀ ಡಿ. ಶೆಟ್ಟಿಗಾರ್ ನಿರೂಪಿಸಿದರು.

ಮೂಲ್ಕಿ ತಾಲೂಕಿನಲ್ಲಿ ಯಕ್ಷಗಾನ
ಮೂಲ್ಕಿ : ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಯಕ್ಷಗಾನಕ್ಕೆ ಮೂಲ್ಕಿ ತಾಲೂಕಿನ ಕೊಡುಗೆ ಅನನ್ಯವಾಗಿದ್ದು. ಮೂಲ್ಕಿ ತಾಲೂಕಿನಲ್ಲಿ ಕಟೀಲು, ಮೂಲ್ಕಿ, ಬಪ್ಪನಾಡು, ಪಾವಂಜೆ, ಸಸಿಹಿತ್ಲು ಹೀಗೆ ಅನೇಕ ಯಕ್ಷಗಾನ ಮೇಳಗಳಿವೆ. ಮಕ್ಕಳ ಮೇಳಗಳಿವೆ. ಪ್ರಸಂಗಕರ್ತರಿದ್ದಾರೆ. ತಾಳಮದ್ದಲೆ, ಯಕ್ಷಗಾನದ ಪ್ರಭಾವ ಇಲ್ಲಿ ಬಹಳಷ್ಟಿದೆ ಎಂದು ದೇವೀಪ್ರಕಾಶ ರಾವ್ ಹೇಳಿದರು.
ಮೂಲ್ಕಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ವೈಭವದ ಬಗ್ಗೆ ಮಾತನಾಡಿದರು.
ಪ್ರಕಾಶ ಸುವರ್ಣ, ಐಕಳ ಜಯಪಾಲ ಶೆಟ್ಟಿ ಸುನಿಲ್ ಅಂಚನ್ ಸಮ್ಮೇಳನಾಧ್ಯಕ್ಷ ಶ್ರೀಧರ ಡಿ.ಎಸ್ ವೇದಿಕೆಯಲ್ಲಿದ್ದರು. ಕೃಷ್ಣ ರಾಜ ಭಟ್ ನಿರೂಪಿಸಿದರು.
  ಸಮ್ಮೇಳನದಲ್ಲಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಗೋಷ್ಟಿಯಲ್ಲಿ ನಡುಗೋಡು ಶಾಲೆಯ ಯಕ್ಷ, ಮೂಲ್ಕಿ ಸರಕಾರಿ ಕಾಲೇಜಿನ ಲಕ್ಷ್ಮೀ, ಐಕಳ ಪೊಂಪೈ ಕಾಲೇಜಿನ ಸನ್ನಿಧಿ ವಿಷಯ ಮಂಡಿಸಿದರು.
ವೇದವ್ಯಾಸ ಉಡುಪ ಉಪಸ್ಥಿತರಿದ್ದರು.

ಸಾಹಿತ್ಯದ ಸೃಷ್ಟಿಗೆ  ಚಿತ್ರಗಳು ಹಾಗೂ ಛಾಯಚಿತ್ರಗಳು ಪ್ರೇರಣೆ ನೀಡಿ ಉತ್ತಮ ಸಾಹಿತ್ಯಗಳು ಕವನಗಳು ಬರಹಗಳು ರಚಿಸಲ್ಪಟ್ಟಿವೆ ಎಂದು ಡಾ. ಇ. ವಿಕ್ಟರ್ ವಾಸ್ ಹೇಳಿದರು.
ಅವರು ಚಿತ್ರ ಮತ್ತು ಸಾಹಿತ್ಯ ಪ್ರಭಾವ ಪ್ರತಿಫಲನ ಗೋಷ್ಟಿಯಲ್ಲಿ ಚಿತ್ರ ಛಾಯಾಚಿತ್ರಗಳು ಸಾಹಿತ್ಯಕ್ಕೆ ಹೇಗೆ ಪ್ರೇರಣೆ ಎಂದು ವಿವರಿಸಿದರು.
ರಾಮದಾಸ ಶೆಣೈ ಉಪಸ್ಥಿತರಿದ್ದರು.

ಸಾಹಿತಿ ಶ್ರೀಧರ ಡಿ.ಎಸ್. ಅವರ ನೂತನ ಕೃತಿ ಪುರಾಣ ಲೋಕದ ವಿಶಿಷ್ಟ ಪಾತ್ರಗಳು ಕೃತಿಯನ್ನು ಖ್ಯಾತ ಬರಹಗಾರ ಅಬ್ದುಲ್ ರಶೀದ್ ಪುಸ್ತಕದ ಕಪಾಟಿನಿಂದ ಕೃತಿಯನ್ನು ಆರಿಸುವ ಮೂಲಕ ಬಿಡುಗಡೆಗೊಳಿಸಿದರು. ಡಾ. ಎಂ.ಪಿ. ಶ್ರೀನಾಥ್, ಪ್ರದೀಪ ಕುಮಾರ ಕಲ್ಕೂರ, ಗಣೇಶ ಅಮೀನ್ ಸಂಕಮಾರ್, ಪೃಥ್ವಿರಾಜ್ ಆಚಾರ್ಯ, ಶ್ರೀನಿವಾಸ ಆಚಾರ್ಯ, ವಿನಯಾಚಾರ್, ಮಾಧವ ಎಂ.ಕೆ. ರೆ.ಫಾ. ಓಸ್ವಾಲ್ಡ್ ಮೊಂತೆರೋ, ಮಿಥುನ ಕೊಡೆತ್ತೂರು ಮತ್ತಿತರರಿದ್ದರು. 
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article