ಗುರುಪುರದಲ್ಲಿ `ಗಜಾನನ ಕ್ರಿಕೆಟರ್ಸ್'ತುಳು ಚಿತ್ರದ ಚಿತ್ರೀಕರಣ
Monday, February 10, 2025
ಕೈಕಂಬ : ಪ್ರಜ್ವಲ್ ಶೆಟ್ಟಿ ನಿರ್ಮಾಣ ಹಾಗೂ ಕೀರ್ತನ್ ಭಂಡಾರಿ ನಿರ್ದೇಶನದ `ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 98)' ತುಳು ಚಿತ್ರದ ಕೊನೆಯ ಹಂತದ ಚಿತ್ರೀಕರಣ ಗುರುಪುರ ಕುಕ್ಕುದಕಟ್ಟೆಯ ಗದ್ದೆ ಕ್ರಿಕೆಟ್ ಮೈದಾನದಲ್ಲಿ ಆರಂಭಗೊಂಡಿದ್ದು, ಇಲ್ಲಿ ಮುಂದಿನ 4 ದಿನ ಚಿತ್ರೀಕರಣ ಮುಂದುವರಿಯಲಿದೆ.
ತಾರಾಗಣದಲ್ಲಿ ವಿನಿತ್, ಅನ್ವಿತಾ ಸಾಗರ್, ಸಮತಾ, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡು, ಉಮೇಶ್ ಮಿಜಾರು, ವಾಲ್ಟರ್ ನಂದಳಿಕೆ, ರೂಪಾ ವರ್ಕಾಡಿ, ಲಂಚೂ ಲಾಲ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪುಷ್ಪರಾಜ್ ಬೊಳ್ಳೂರು, ಸಚಿನ್ ಮಾಡ, ಸರ್ವೋತ್ತಮ ಶೆಟ್ಟಿ, ಜೇಮ್ಸ್ ಮೆಂಡೋನ್ಸ್, ಕರಣ್ ಪೂಜಾರಿ ಮತ್ತಿತರರು ಇದ್ದಾರೆ.
ರೋಹನ್ ಪಿರೇರ ವಾಮಂಜೂರು ಮತ್ತು ಸಂತೋಷ್ ಲಾಡ್ ಸಹ ನಿರ್ಮಾಪಕತ್ವದ ಈ ಚಿತ್ರಕ್ಕೆ ಸುಜನ್ ಕುಮಾರ್ ತೋನ್ಸ್ ಸಂಗೀತ ನೀಡಿದ್ದಾರೆ. ಕೀರ್ತನ್ ಭಂಡಾರಿ ಹಾಡು ಬರೆದಿದ್ದಾರೆ. ಜಿಲ್ಲೆಯ ಹಲವು ಪ್ರಮುಖ ಕಡೆಗಳಲ್ಲಿ ಕಳೆದ ಒಂದೂವರೆ ತಿಂಗಳಿಂದ ಚಿತ್ರೀಕರಣ ನಡೆಯುತ್ತಿದ್ದು, ಕ್ರಿಕೆಟ್ ಪಂದ್ಯಾಟ ಮತ್ತು ಕ್ರಿಕೆಟ್ ಜೀವನಕ್ಕೆ ಸಂಬಂಧಿಸಿದ ಈ ಚಿತ್ರವು ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಬುಧವಾರದಂದು ಕುಕ್ಕುದಕಟ್ಟೆ ಮೈದಾನದಲ್ಲಿ ಚಿತ್ರ ಟೀಸರ್ ಬಿಡುಗಡೆ ಸಮಾರಂಭ ನಡೆಯಲಿದೆ.