-->


ಫೆ. 28ರಂದು ಗೆಜ್ಜೆಗಿರಿ ಕ್ಷೇತ್ರಕ್ಕೆನಗರದಿಂದ ಬೃಹತ್ ಹೊರೆಕಾಣಿಕೆ

ಫೆ. 28ರಂದು ಗೆಜ್ಜೆಗಿರಿ ಕ್ಷೇತ್ರಕ್ಕೆನಗರದಿಂದ ಬೃಹತ್ ಹೊರೆಕಾಣಿಕೆ



ಕೈಕಂಬ : ಪುತ್ತೂರಿನಲ್ಲಿರುವ ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತಿಲ್‍ನಲ್ಲಿ ಮಾರ್ಚ್ 1ರಿಂದ ಆರಂಭವಾಗಲಿರುವ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಮಂಗಳೂರು ನಗರದಿಂದ ಫೆ. 28ರಂದು ಗೆಜ್ಜೆಗಿರಿಯತ್ತ ಬೃಹತ್ ಹೊರೆಕಾಣಿಕೆ ವಾಹನ ಮೆರವಣಿಗೆ ಸಾಗಲಿದೆ ಎಂದು ಶ್ರೀ ಕ್ಷೇತ್ರದ ಪದಾಧಿಕಾರಿ ಮೋಹನದಾಸ್ ಬಂಗೇರ ವಾಮಂಜೂರು ತಿಳಿಸಿದರು.

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಸಾಕಷ್ಟು ಹೊರೆಕಾಣಿಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಡಾ. ಭರತ್ ಶೆಟ್ಟಿ ಭರವಸೆ ನೀಡಿದ್ದರೆ, ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಮನಪಾ ವಾರ್ಡ್‍ಗಳಿಂದ ಹಾಗೂ ಹಿಂದೂ ಮುಖಂಡ ಶರಣ್ ಪಂಪ್ವೆಲ್ ಅವರು ಹಿಂದೂ ಸಂಘಟನೆಗಳಿಂದ ಹೊರೆಕಾಣಿಕೆ ವಾಹನಗಳ ವ್ಯವಸ್ಥೆಯ ಭರವಸೆ ನೀಡಿದ್ದಾರೆ ಎಂದರು.

ಫೆ. 28ರಂದು ಬೆಳಿಗ್ಗೆ 10 ಗಂಟೆಗೆ ಎಲ್ಲ ಕಡೆಯಿಂದ ಮಂಗಳೂರಿಗೆ ಬರುವ ಹೊರೆಕಾಣಿಕೆಯ ವಾಹನಗಳು ಕಂಕನಾಡಿ ಗರಡಿಯಲ್ಲಿ ಒಟ್ಟು ಸೇರಲಿವೆ. ಗರಡಿಯಲ್ಲಿ ವಿಶೇಷ ಪೂಜೆ ನಡೆದ ಬಳಿಕ ಹೊರೆಕಾಣಿಕೆ ವಾಹನಗಳು ಕಂಕನಾಡಿ ಶ್ರೀ ಬೈದರ್ಕಳ ಗರಡಿಯಿಂದ ಪುತ್ತೂರಿನತ್ತ ಸಾಗಲಿವೆ. ಮಧ್ಯಾಹ್ನ 1 ಗಂಟೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಅಪರಾಹ್ನ 3 ಗಂಟೆಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಹೊರೆಕಾಣಿಕೆ ವಾಹನಗಳು ತಲುಪಲಿವೆ ಎಂದು ಗೆಜ್ಜೆಗಿರಿ ಹೊರೆಕಾಣಿಕೆ ಸಮಿತಿ ಸಂಚಾಲಕ ಸತೀಶ್ ಕುಂಪಲ ತಿಳಿಸಿದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article