ಫೆ.24 - 27ರ ತನಕ ಶ್ರೀಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ ಉತ್ಸವ
Saturday, February 22, 2025
ಕೈಕಂಬ:ಶ್ರೀಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿಯಲ್ಲಿ ಫೆ.24 ರಿಂದ ಫೆ.27 ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ ಉತ್ಸವವು ಕದ್ರಿ ಜೋಗಿಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಿರಾಜ ನಿರ್ಮಲನಾಥ್ ಮಹಾರಾಜ್ ಇವರ ಆಶೀರ್ವಾದಗಳೊಂದಿಗೆ ಹಾಗೂ ಶ್ರೀ ಕ್ಷೇತ್ರ ಕದ್ರಿಯ ಬ್ರಹ್ಮಶ್ರೀ ದೇರೆಬೈಲು ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಲಿದೆ.ಫೆ.24 ರ ಸೋಮವಾರದಂದು ಬೆಳಿಗ್ಗೆ 6:45 ಕ್ಕೆ ದೀಪ ಬೆಳಗಿಸಿ ಸಾಮೂಹಿಕ ಪ್ರಾರ್ಥನೆ,7 ಕ್ಕೆ ಪ್ರಾತಃ ಕಾಲ ಪೂಜೆ,9 :30ರಿಂದ ಶತರುದ್ರಾಭಿಷೇಕ ಹಾಗೂ ಮಹಾರುದ್ರಯಾಗ,ಮಧ್ಯಾಹ್ನ 12 ಕ್ಕೆ ಪೂರ್ಣಾಹುತಿ ,ಮಹಾಪೂಜೆ,12:30 ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ,1:30ರಿಂದ ಮಳಲಿಯ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ತಾಳಮದ್ದಳೆ ದಕ್ಷಯಜ್ಞ,ಸಂಜೆ 5 ರಿಂದ ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ಮಕ್ಕಳ ಭಜನಾ ಮಂಡಳಿಯವರಿಂದ ಭಜನೆ ,ರಾತ್ರಿ 7 ರಿಂದ ರಂಗಪೂಜೆ,8 ರಿಂದ ಮಹಾಪೂಜೆ,ಉತ್ಸವ ಬಲಿ,ಬಟ್ಟಲು ಕಾಣಿಕೆ ಹಾಗೂ ಅನ್ನ ಸಂತರ್ಪಣೆ ,ಫೆ.25 ರ ಮಂಗಳವಾರ ಬೆಳಿಗ್ಗೆ 7 ಕ್ಕೆ ಪ್ರಾತಃ ಕಾಲ ಪೂಜೆ,8 ರಿಂದ ಮಹಿಷಂದಾಯ,ಧೂಮಾವತಿ ಬಂಟ,ಅಣ್ಣಪ್ಪ ಪಂಜುರ್ಲಿ ,ಮಲರಾಯ ಬಂಟ ದೈವಗಳ ಭಂಡಾರ ಏರುವುದು,11 ರಿಂದ ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ಭಜನಾ ಮಂಡಳಿಯವರಿಂದ ಭಜನೆ,12:30 ಕ್ಕೆ ಮಹಾ ಪೂಜೆ ,ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ,ಸಂಜೆ 6 ರಿಂದ ಭಜನಾ ಸೇವೆ,ರಾತ್ರಿ 7 ರಿಂದ ಮಹಾಪೂಜೆ,ಪ್ರಸಾದ ವಿತರಣೆ,ಅನ್ನ ಸಂತರ್ಪಣೆ,8 ರಿಂದ ಮಹಿಷಂದಾಯ ದೈವದ ನೇಮೋತ್ಸವ,9ರಿಂದ ಧೂಮಾವತಿ ಬಂಟ ದೈವಗಳ ಎಣ್ಣೆ ಬೂಲ್ಯ,10 ರಿಂದ ಮಲರಾಯ ಬಂಟ ದೈವಗಳ ನೇಮೋತ್ಸವ,12 ರಿಂದ ಅಣ್ಣಪ್ಪ ಪಂಜುರ್ಲಿ ದೈವದ ಎಣ್ಣೆ ಬೂಲ್ಯ,12:30 ರಿಂದ ಧೂಮಾವತಿ ಬಂಟ ದೈವಗಳ ನೇಮೋತ್ಸವ ಹಾಗೂ ರಾತ್ರಿ 2:30 ರಿಂದ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವವು ನಡೆಯಲಿದೆ.ಫೆ.26 ರ ಬುಧವಾರದಂದು ಬೆಳಿಗ್ಗೆ 6:30 ರಿಂದ ಮಹಾಶಿವರಾತ್ರಿ ಪ್ರಯುಕ್ತ ಏಕಾಹಾ ಭಜನಾ ಸೇವೆ ,ಫೆ.27 ರ ಗುರುವಾರದಂದು ಸಂಜೆ 5 ರಿಂದ ಮಳಲಿ ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ಭಜನಾ ಮಂಡಳಿಯವರಿಂದ ಭಜನಾಸೇವೆ, ರಾತ್ರಿ 7 ರಿಂದ ಮಹಾ ಪೂಜೆ,ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ರಾತ್ರಿ 8:30 ರಿಂದ ಕಲ್ಲುರ್ಟಿ ಪಂಜುಲಿ ದೈವಗಳ ಕೋಲ ಬಳಿ ಸೇವೆ ಹಾಗೂ ರಾತ್ರಿ 11 ರಿಂದ ಗುಳಿಗ ದೈವದ ಗಗ್ಗರ ಸೇವೆನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.