ಕಟೀಲ್ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ವರ್ಷಾಚರಣೆ
Friday, February 14, 2025
ಕಟೀಲು : ಮನುಷ್ಯ ಪ್ರಯತ್ನ ಮುಖ್ಯವಾಗಿದೆ. ದೇವರು ಇದ್ದಾರೆಂದು ನಮ್ಮ ಕೆಲಸ ಮಾಡುತ್ತಲೇ ಇರಬೇಕು. ಮನುಷ್ಯ ಪ್ರಯತ್ನವೂ ಬೇಕು ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ಕಟೀಲ್ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ನ 29 ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ನಿವೃತ್ತ ಉಪನ್ಯಾಸಕ ಸುರೇಶ್ ಶೆಟ್ಟಿ ಹಾಗೂ ಸಾಹಿತಿ ವಿಲ್ಸನ್ ಕಟೀಲು ಅವರನ್ನು ಸಂಮಾನಿಸಲಾಯಿತು.
ಎಂಅರ್ ಪಿಎಲ್ ನ ಸ್ಟೀವನ್ ಪಿಂಟೋ. ಉದ್ಯಮಿ ಗಿರೀಶ್ ಶೆಟ್ಟಿ, ಲೋಕಯ್ಯ ಸಾಲ್ಯಾನ್. ಈಶ್ವರ ಕಟೀಲ್, ಕೇಶವ್ ಕಟೀಲು, ಕಿರಣ್ ಶೆಟ್ಟಿ, ರಮೇಶ್, ಮೋಹನ್, ವೆಂಕಟರಮಣ ಮಯ್ಯ ಮತ್ತಿತರರಿದ್ದರು.
ರಾಜೇಂದ್ರ ಎಕ್ಕಾರು ನಿರೂಪಿಸಿದರು.
ನಂದಿನಿ ನದಿಯ ಅವತರಣ ದಿನದ ಅಂಗವಾಗಿ ಶ್ರೀ ಸತ್ಯನಾರಾಯಣ ಪೂಜೆಯನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.