
'ದುರ್ಗಾ ಸಂಭ್ರಮ ' ಕಾರ್ಯಕ್ರಮ
Friday, February 14, 2025
ಎಕ್ಕಾರು:35ನೇ ವರ್ಷದ ಸಂಭ್ರಮದಲ್ಲಿರುವ ದುರ್ಗಾ ಕಲ್ಚರಲ್ &ಕ್ರಿಕೆಟ್ ಕ್ಲಬ್ ಎಕ್ಕಾರು ಹಾಗೂ ದಶಮಾನೋತ್ಸವ ಸಂಭ್ರಮದಲ್ಲಿರುವ ಶ್ರೀ ದುರ್ಗಾ ಮಹಿಳಾ ಮಂಡಳಿ ಎಕ್ಕಾರು ಇದರ 'ದುರ್ಗಾ ಸಂಭ್ರಮ ' ಕಾರ್ಯಕ್ರಮವು ಎಕ್ಕಾರು ಬಂಟರ ಭವನದ ಮೈದಾನದಲ್ಲಿ ಫೆ.15ರಂದು ಸಂಜೆ 5:30 ರಿಂದ ನಡೆಯಲಿದೆ.ಸಂಜೆ 7:30 ಕ್ಕೆ ಸಭಾ ಕಾರ್ಯಕ್ರಮವು ನಡೆಯಲಿದ್ದು,ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಕಟೀಲು ದೇವಳದ ಅನುವಂಶಿಕ ಅರ್ಚಕರಾದ ವೇ.ಮೂ.ಲಕ್ಷ್ಮೀನಾರಾಯಣ ಆಸ್ರಣ್ಣ,ಅನಂತಪದ್ಮನಾಭ ಆಸ್ರಣ್ಣ,ಹರಿನಾರಾಯಣ ದಾಸ ಆಸ್ರಣ್ಣ ಹಾಗೂ ಎಕ್ಕಾರು ಶ್ರೀಕೃಷ್ಣ ಮಠದ ವೇ.ಮೂ. ಹರಿದಾಸ ಉಡುಪ ಆಶೀರ್ವಚನ ನೀಡಲಿದ್ದಾರೆ.ಕಾರ್ಯಕ್ರಮದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮತ್ತಿತರ ಗಣ್ಯಾತೀಗಣ್ಯರು ಉಪಸ್ಥಿತಲಿರುವರು.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರಗತಿಪರ ಕೃಷಿಕ ರೋನಾಲ್ಡ್ ಫೆರ್ನಾಂಡಿಸ್ ಪೆರ್ಮುದೆ,ದ.ಕ ಜಿ .ಪಂ ಹಿ.ಪ್ರಾ.ಶಾಲೆ ಬಡಗ ಎಕ್ಕಾರು ಇಲ್ಲಿನ ಶಿಕ್ಷಕಿ ಶ್ರೀಮತಿ ಜಯಂತಿ ರಮಾನಂದ,ದೈಹಿಕ ಶಿಕ್ಷಕಿ ಶ್ರೀ ವಿದ್ಯಾಲತಾ ಅವರಿಗೆ ಗೌರವಾರ್ಪಣೆ , ಗುರುವಂದನಾ ಕಾರ್ಯಕ್ರಮ ಹಾಗೂ ದಾನಿಗಳಿಗೆ ಗೌರವಾರ್ಪಣೆ ನಡೆಯಲಿದೆ.
ಸಂಜೆ 5:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು,ದುರ್ಗಾ ಕಲ್ಚರಲ್ ಕ್ರಿಕೆಟ್ ಕ್ಲಬ್ ಎಕ್ಕಾರು ಹಾಗೂ ಶ್ರೀ ದುರ್ಗಾ ಮಹಿಳಾ ಮಂಡಳಿ ಎಕ್ಕಾರು ಇದರ ಶ್ರೀದುರ್ಗಾ ಭಾಗವತಿಕೆಯ ತರಗತಿಯ ಮಕ್ಕಳಿಂದ ಪೂರ್ವರಂಗದ ಹಾಡುಗಾರಿಕೆ,ಬಾಲಗೋಕುಲದ ಮಕ್ಕಳಿಂದ ನೃತ್ಯ ವೈವಿಧ್ಯ,
ಶ್ರೀ ದುರ್ಗಾ ನಾಟ್ಯ ಕಲಾಕೇಂದ್ರದ ಮಕ್ಕಳಿಂದ ಭರತನಾಟ್ಯ ಸಂಘದ ಸದಸ್ಯರಿಂದ ಮನೋರಂಜನ ಕಾರ್ಯಕ್ರಮಗಳು, ಶ್ರೀ ದುರ್ಗಾ ಮಹಿಳಾ ಮಂಡಳಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ ಅನ್ನ ಸಂತರ್ಪಣೆ ನಡೆಲಿರುವುದು. ರಾತ್ರಿ 10:45 ರಿಂದ ಕಲಾ ಸಂಗಮ ಕಲಾವಿದರಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಅತ್ಯಾಧ್ಬುತ ತುಳು ನಾಟಕ ಶಿವದೂತೆ ಗುಳಿಗೆ ವಿಭಿನ್ನ ಶೈಲಿಯ ತುಳುನಾಟಕ ನಡೆಯಲಿದೆ.