-->


ಮೀರಾ ” ತುಳು ಚಲನಚಿತ್ರದ ಟೀಸರ್ ಬಿಡುಗಡೆ

ಮೀರಾ ” ತುಳು ಚಲನಚಿತ್ರದ ಟೀಸರ್ ಬಿಡುಗಡೆ


ಮಂಗಳೂರು: ಬಹು ನಿರೀಕ್ಷಿತ ”ಮೀರಾ“ ತುಳು ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ಬುಧವಾರ ಸಂಜೆ ನಗರದ ಖಾಸಗಿ ಹೋಟೆಲ್ ನಲ್ಲಿ ಜರುಗಿತು.
ಸಿನಿಮಾ ನಿರ್ಮಾಪಕ ಲಂಚುಲಾಲ್ ಮಾತಾಡಿ, “ಹೆಣ್ಣಿನ ಬದುಕಿನ ಕುರಿತಾದ ಕಥೆ ಎನ್ನುವ ಕಾರಣಕ್ಕೆ ಸಿನಿಮಾವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದೇನೆ. ಫೆ.21ಕ್ಕೆ ನಮ್ಮ ಮೀರಾ ಸಿನಿಮಾ ಬಿಡುಗಡೆಯಾಗಲಿದೆ. ಎಲ್ಲರೂ ಸಿನಿಮಾ ನೋಡಿ ನಮ್ಮನ್ನು ಬೆಂಬಲಿಸಿ. ಸಿನಿಮಾದ ಸಂಗೀತ ಹಾಡುಗಳು ಬಹಳ ಚೆನ್ನಾಗಿವೆ. ಚಿತ್ರತಂಡಕ್ಕೆ ನಿಮ್ಮ ಆಶೀರ್ವಾದ ಬೇಕು” ಎಂದರು.
ಸಿನಿಮಾ ಬಗ್ಗೆ ಮಾತಾಡಿದ ನಟ ಮಂಜು ರೈ ಮೂಳೂರು ಮಾತಾಡಿ, “ತುಳು ಭಾಷೆಯ ಮೇಲಿನ ಅಭಿಮಾನದಿಂದ ಕೇರಳದಿಂದ ಬಂದ ಅಶ್ವಥ್ ಅನ್ನುವ ನಿರ್ದೇಶಕ ಮೀರಾ ಸಿನಿಮಾ ಮಾಡಿದ್ದಾರೆ. ಈ ಸಿನಿಮಾವನ್ನು ಗೆಲ್ಲಿಸುವುದು ತುಳುವರಾದ ನಮ್ಮೆಲ್ಲರ ಕರ್ತವ್ಯ. ತುಳು ಚಿತ್ರವನ್ನು ನೋಡಲು ಸಿನಿಮಾ ಮಂದಿರಕ್ಕೆ ಜನರು ಬರುವುದಿಲ್ಲ. ಈ ವೇಳೆಯಲ್ಲಿ ಲಂಚುಲಾಲ್ ದೊಡ್ಡ ಮನಸ್ಸು ಮಾಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಚಿತ್ರತಂಡವನ್ನು ಆಶಿರ್ವದಿಸಿ” ಎಂದರು.
ಬಾಲನಟಿ ಲಕ್ಷ್ಯ ಮಾತಾಡಿ, “ಸಿನಿಮಾದಲ್ಲಿ ನಟಿಸುವ ಬಗ್ಗೆ ನನಗೆ ಆಸಕ್ತಿಯಿತ್ತು. ಈ ಸಿನಿಮಾ ನನಗೆ ಅವಕಾಶ ನೀಡಿತು. ತುಂಬಾ ಖುಷಿಯಾಗುತ್ತಿದೆ” ಎಂದರು.
ನಟಿ ಇಶಿತಾ ಶೆಟ್ಟಿ ಮಾತಾಡಿ, “ನಾನು ಕಾಸರಗೋಡು ಮೂಲದವಳು. ನನಗೆ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ” ಎಂದರು.
ಇದೇ ಸಂದರ್ಭದಲ್ಲಿ ಬೀದಿನಾಯಿಗಳ ಆರೈಕೆಯಲ್ಲಿ ತೊಡಗಿರುವ ರಜನಿ ಶೆಟ್ಟಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಯತೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article