-->


ಅಭಿವೃದ್ಧಿ ಪರ ಬಜೆಟ್ -  ಶಾಸಕ ಡಾ. ಭರತ್ ಶೆಟ್ಟಿ ವೈ

ಅಭಿವೃದ್ಧಿ ಪರ ಬಜೆಟ್ - ಶಾಸಕ ಡಾ. ಭರತ್ ಶೆಟ್ಟಿ ವೈ

ಸುರತ್ಕಲ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಮದ್ಯಮ ವರ್ಗಕ್ಕೆ ಆದಾಯ ತೆರಿಗೆ ವ್ಯಾಪ್ತಿಯನ್ನು 12 ಲಕ್ಷ ರೂ.ವರೆಗೆ ವಿಸ್ತರಿಸಿದ್ದು ಬಹುದೊಡ್ಡ ಗಿಫ್ಟ್ ನೀಡಿದ್ದಾರೆ. ದೇಶದ ಬೆನ್ನೆಲುಬಿನಂತೆ ಇರುವ ಬಡ ಹಾಗೂ  ಮದ್ಯಮ ವರ್ಗ  ಜನರಲ್ಲಿ ಹೆಚ್ಚು ಸಂಪತ್ತು ಉಳಿತಾಯವಾಗುತ್ತದೆ ಮಾತ್ರವಲ್ಲ ಕೊಳ್ಳುವ ಶಕ್ತಿ ಹೆಚ್ಚಾಗಿ ಆರ್ಥಿಕವಾಗಿ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡಿದಂತಾಗಿದೆ.

ಜೀವರಕ್ಷಕ ಔಷಧಿ ಸುಂಕದಲ್ಲಿ ಗಣನೀಯವಾಗಿ ಕಡಿತ ಮಾಡಿದ್ದು ಇದರಿಂದ ಪ್ರಮುಖ ಔಷಧಿಗಳ ದರ ಕಡಿಮೆಯಾಗಿ ಸಾಮಾನ್ಯ ಜನರಿಗೆ ವರದಾನವಾಗಲಿದೆ. ಕೃಷಿ, ಶಿಕ್ಷಣ,  ಸಣ್ಣ ಕೈಗಾರಿಕೆಗೆ ಒತ್ತು, ಸಂಶೋಧನೆ, ಕೌಶಲ್ಯ ವೃದ್ಧಿಗೆ ಆದ್ಯತೆ ನೀಡಿ ಭವಿಷ್ಯದ ಯುವ ಸಮಾಜವನ್ನು ಬಲಾಡ್ಯಗೊಳಿಸುವ ಅತ್ಯುತ್ತಮ, ಅಭಿವೃದ್ಧಿ ಪರ ಬಜೆಟ್ ಆಗಿದೆ ಎಂದು ಶಾಸಕರಾದ ಡಾ. ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article