ಬಡಕರೆ ಶ್ರೀ ಜಾರಂದಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ವಿಜಯ ಯುವ ಸಂಗಮ (ರಿ)ಎಕ್ಕಾರು ಇದರ 28 ನೇ ವರ್ಷದ ವಾರ್ಷಿಕೋತ್ಸವ
Tuesday, January 28, 2025
ಎಕ್ಕಾರು:ಬಡಕರೆ ಶ್ರೀ ಜಾರಂದಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ವಿಜಯ ಯುವ ಸಂಗಮ (ರಿ)ಎಕ್ಕಾರು ಇದರ 28 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಫೆ.13 ರ ಗುರುವಾರದಂದು ನಡೆಯಲಿದೆ.
ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಸಂಜೆ 7 ಕ್ಕೆ ಕಥೆತ ಬೀರೆ ಬಿರುದಾಂಕಿತ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ನಾಟಕಕಾರ ದಿನಕರ ಭಂಡಾರಿ ಕಣಂಜಾರು ರಚಿಸಿದ ಎಕ್ಕಾರು ವಿಜಯ ಯುವ ಸಂಗಮದ ಸದಸ್ಯರ ಅಭಿನಯದಲ್ಲಿ ಪಿರ ಬನ್ನಗ -2 ತುಳು ಹಾಸ್ಯಮಯ ನಾಟಕ ಹಾಗೂ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ರಾತ್ರಿ11ರಿಂದ ಬಡಕರೆ ಧರ್ಮದೈವ ಶ್ರೀಜಾರಂದಾಯ ಮತ್ತು ಬಂಟದೈವದ ವಾರ್ಷಿಕ ನೇಮೋತ್ಸವವು ವಿಜೃಂಭಣೆಯಿಂದ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.