ಜ.29-ಫೆ.10 ರ ತನಕ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ತಾಳಿಪಾಡಿ ಮಠ.ಅಷ್ಟಬಂಧ ಬ್ರಹ್ಮಕಲಶೋತ್ಸವ, ಬ್ರಹ್ಮ ಮಂಡಲೋತ್ಸವ ,18 ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ
Tuesday, January 28, 2025
ಕಿನ್ನಿಗೋಳಿ:ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ತಾಳಿಪಾಡಿ ಮಠ ಇಲ್ಲಿ ಜ.29 ರಿಂದ ಫೆ. 10 ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ, ಬ್ರಹ್ಮ ಮಂಡಲೋತ್ಸವ ಮತ್ತು 18 ನೇ ಪ್ರತಿಷ್ಠಾ ವರ್ಧಂತ್ಯುತ್ಸವ ವಾರ್ಷಿಕ ಜಾತ್ರಾ ಮಹೋತ್ಸವವು ಕ್ಷೇತ್ರದ ತಂತ್ರಿಗಳಾದ ವೇ.ಮೂ.ಶ್ರೀ ಜಗದೀಶ್ ಉಪಾಧ್ಯಾಯ ಪಾವಂಜೆ ಇವರ ನೇತೃತ್ವದಲ್ಲಿ ನೆರವೇರಲಿದೆ .ಜ.30 ರ ಗುರುವಾರ ಬೆಳಗ್ಗೆ 11.30 ಕ್ಕೆ ಧ್ವಜಾರೋಹಣ, ಫೆ. 2 ರ ಭಾನುವಾರ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳು, ಶ್ರೀ ಶಂಕರಾಚಾರ್ಯ ಸಂಸ್ಥಾನ, ಎಡನೀರು ಮಠ, ಕಾಸರಗೋಡು ಇವರ ಉಪಸ್ಥಿತಿಯಲ್ಲಿ 9.25 ರ ಮೀನ ಲಗ್ನದಲ್ಲಿ ಭವಾನಿ ಶಂಕರ ದೇವರ ಪ್ರತಿಷ್ಠೆ ಹಾಗೂ 10.20 ರ ಮೀನ ಲಗ್ನದಲ್ಲಿ ಭವಾನಿ ಶಂಕರ ದೇವರಿಗೆ ಕಲಶಾಭಿಷೇಕ ವಿಷ್ಣು ಸಹಸ್ರನಾಮ ಹೋಮ, ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ.ಫೆ. 3 ರ ಸೋಮವಾರ 10.15 ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವರಿಗೆ "ಬ್ರಹ್ಮ ಕಲಶಾಭಿಷೇಕ" ನಡೆಯಲಿದೆ.ಮಧ್ಯಾಹ್ನ ಮಹಾಅನ್ನಸಂತರ್ಪಣೆ ಹಾಗೂ ಧ್ವಜಾವರೋಹಣ ನಡೆಯಲಿದೆ.ಫೆ.
5 ರ ಬುಧವಾರ ಬೆಳಿಗ್ಗೆ 7 ರಿಂದ ನಾಗರಕ್ತೇಶ್ವರ್ಯಾದಿ ಸಾನಿಧ್ಯದಲ್ಲಿ ಕಲಾಭಿವ್ರದ್ದಿ,ಕಲಶಪ್ರತಿಷ್ಠೆ, ಕಲಶಾಭಿಷೇಕ, ಪ್ರಾಯಶ್ಚಿತ್ತ ಹೋಮ, ಆಶ್ಲೇಷಾ ಬಲಿ, ಮಹಾಪೂಜೆ,ಪ್ರಸಾದ ವಿತರಣೆ, ಸಾಯಂಕಾಲ 5 ರಿಂದ ನಾಗಬನದಲ್ಲಿ ಹಾಲಿಟ್ಟು ಸೇವೆ,ಮಂಡಲಪೂಜೆ, "ಬ್ರಹ್ಮಮಂಡಲ ಸೇವೆ" ಪ್ರಸಾದ ವಿತರಣೆ ನಡೆದು, ರಾತ್ರಿ 10.30 ರಿಂದ ವರ್ತೆ ಪಂಜುರ್ಲಿ ದೈವಗಳ ಗಗ್ಗರ ಸೇವೆ ನಡೆಯಲಿದೆ.
ಫೆ. 7 ರ ಶುಕ್ರವಾರ ದಿಂದ ಫೆ.10 ರವರೆಗೆ 18 ನೇ ಪ್ರತಿಷ್ಠಾ ವರ್ಧಂತ್ಯುತ್ಸವ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.ಫೆ.
9 ರ ರವಿವಾರ ಪ್ರಧಾನ ದೇವರಿಗೆ, ಗಣಪತಿ ದೇವರಿಗೆ, ಕಲಾಭಿವ್ರದ್ದಿ ಕಲಶಾಭಿಷೇಕ 11.30 ರಿಂದ ಧ್ವಜಾರೋಹಣ ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ.ಫೆ.
10 ರ ಸೋಮವಾರ ಬೆಳಗ್ಗೆ 6.50 ಕ್ಕೆ ಕವಾಟೋದ್ಘಾಟನೆ,10 ರಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ 12.30 ರಿಂದ ಮಹಾಪೂಜೆ,ಪಲ್ಲಪೂಜೆ, ಪ್ರಸಾದ ವಿತರಣೆ ನಡೆದು ಸಾಯಂಕಾಲ 6 ರಿಂದ ಉತ್ಸವ ಬಲಿ,ಯಾತ್ರ ಬಲಿ,ಓಕುಳಿ,ಜಳಕ ಕಟ್ಟೆ ಪೂಜೆ,ವಸಂತ ಪೂಜೆ, ಧ್ವಜಾವರೋಹಣ ಆಗಿ ಸಂಪ್ರೋಕ್ಷಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಫೆ. 1 ಶನಿವಾರ ರಾತ್ರಿ 7.30 ರಿಂದ ರವೀಂದ್ರ ಪ್ರಭು ಮತ್ತು ಬಳಗ ಮುಲ್ಕಿ ಇವರಿಂದ ರಸಮಂಜರಿ ಕಾರ್ಯಕ್ರಮ, ಫೆ. 2 ಭಾನುವಾರ ರಾತ್ರಿ 9 ಕ್ಕೆ ಪಿಂಗಾರ ಕಲಾವಿದೆರ್ ಬೆದ್ರ ಇವರಿಂದ ಸಾಮಾಜಿಕ, ಹಾಸ್ಯ ನಾಟಕ "ಕದಂಬ", ಫೆ. 3 ಸೋಮವಾರ ರಾತ್ರಿ 9 ರಿಂದ ಬಪ್ಪನಾಡು ಮೇಳದವರಿಂದ "ಬಪ್ಪನಾಡು ಕ್ಷೇತ್ರ ಮಹಾತ್ಮೆ" ಯಕ್ಷಗಾನ ,ಫೆ. 8 ಶನಿವಾರ ರಾತ್ರಿ 7-30 ರಿಂದ ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ಇವರಿಂದ ರಸಮಂಜರಿ ಭಕ್ತಿಗೀತೆ ಕಾರ್ಯಕ್ರಮ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ ,ಫೆ. 9 ಆದಿತ್ಯವಾರ ರಾತ್ರಿ 9 ರಿಂದ ಬಪ್ಪನಾಡು ಮೇಳದವರಿಂದ ಯಕ್ಷಗಾನ,ಫೆ. 10 ಸೋಮವಾರ ರಾತ್ರಿ 9 ರಿಂದ ಸಂಭ್ರಮದ ರಂಗ ಕಲಾವಿದೆರ್ ಕಲ್ಲಮುಂಡ್ಕೂರು ಇವರಿಂದ ತುಳು ಸಾಮಾಜಿಕ ಹಾಸ್ಯಮಯ ನಾಟಕ "ನಂಬುವರಾ ಬುಡ್ಪುವರಾ" ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ ಶ್ರೀ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ, ಶ್ರೀ ಗುರುವೇವತಾ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಮಿತಿಯ ಅಧ್ಯಕ್ಷ ದಯಾನಂದ ಭಟ್ ಕೊಲ್ಲೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.