ಸಸಿಹಿತ್ಲು : ವಿಶ್ವ ಸಮ್ಮೇಳನಕ್ಕೆ ಸಂಭ್ರಮದ ತೆರೆ
Tuesday, January 28, 2025
ಹಳೆಯಂಗಡಿ:ಬ್ರಹ್ಮಶ್ರೀ ನಾರಾಯಣಗುರುಗಳು ಸಮಸ್ತ ಹಿಂದೂ ಸಮಾಜದ ಆಸ್ತಿ, ಅವರನ್ನು ಒಂದು ವರ್ಗಕ್ಕೆ ಸೀಮಿತರನ್ನಾಗಿಸಬೇಡಿ, ಸಮಾಜದಲ್ಲಿ ದುಷ್ಟ ಪ್ರವೃತ್ತಿ ಹೆಚ್ಚಾದಾಗ ಅವತಾರ ಪುರುಷರು ಹುಟ್ಟುತ್ತಾರೆ, ಕೃಷ್ಣ, ರಾಮನ ಅವತಾರ ಆದಂತೆ ನಾರಾಯಣ ಗುರುಗಳ ಅವತಾರವೂ ಆಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಅವರು ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣ ಗುರು ಸಂಘ ಅಗ್ಗಿದಕಳಿಯದ 50ನೇ ವರ್ಷದ ಸಂಭ್ರಮದ ನಿಲೆಯಲ್ಲಿ, ಮೂರು ದಿನ ಕಡಲ ತಟಿಯಲ್ಲಿ ದಿ.ಕಾಂತುಲಕ್ಕಣ ಗುರಿಕಾರರು ಯಾನೆ ಪಠೇಲ್ ಯಾದವ ಜಿ. ಬಂಗೇರ ವೇದಿಕೆಯಲ್ಲಿ ಬಿಲ್ಲವ, ಈಡಿಗ ಸಹಿತ 26 ಪಂಗಡದ ವಿಶ್ವ ಸಮ್ಮೇಳನ ಹಾಗೂ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪಧರ್ೆ "ಸುವರ್ಣ ಸಿರಿ 2025" ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಉದ್ಯಮಿ ಧನಂಜಯ ಶೆಟ್ಟಿ ಹಾಗೂ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಗೆ ಸುವರ್ಣ ಸಿರಿ 2025 ಪ್ರಶಸ್ತಿ, ಹಳೆಯಂಗಡಿ ಬಿಲ್ಲವ ಸಂಘಕ್ಕೆ ರಾಷ್ಟ್ರಮಟ್ಟದ ಸುವರ್ಣ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕುಳಾಯಿ ಫೌಂಡೇಶನ್ನ ಪ್ರತಿಭಾ ಕುಳಾಯಿ ಸಂಘಟನೆಯ ಬಗ್ಗೆ ಮಾತನಾಡಿದರು.
ವಿಶ್ವ ಸಮ್ಮೇಳನ ಸಮಿತಿದ ಗೌರವಾಧ್ಯಕ್ಷ ಚಂದಯ್ಯ ಬಿ. ಕರ್ಕೇರ ರವರು ಅಧ್ಯಕ್ಷತೆಯನ್ನು ವಹಿಸಿದ್ದರು,
ಅಖಿಲ ಭಾರತ ಬಿಲ್ಲವ ಮಹಿಳಾ ಮಂಡಲದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ, ಶಿವಮೊಗ್ಗ ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ, ಕೊಲ್ಯ ಬಿಲ್ಲವ ಸಮಾಜ ಸೇವಾ ಟ್ರಸ್ಟ್, ಸೋಮೇಶ್ವರ ಅಧ್ಯಕ್ಷ ವೇಣು ಗೋಪಾಲ್, ಬೆಸ್ಟ್ ಫೌಂಡೇಶನ್ನ ರಕ್ಷಿತ್ ಶಿವರಾಮ್, ಉದ್ಯಮಿ ಸೂರಜ್ ಸೋನಿ ಕುಮಟಾ, ನಮ್ಮ ಕುಡ್ಲ ಚಾನೆಲ್ ನ ಲೀಲಾಕ್ಷ ಕರ್ಕೇರ , ಕಾರ್ಪೋರೇಟರ್ ಶ್ವೇತಾ, ಶೋಭಾ ರಾಜೇಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ,
ಪುಷ್ಪರಾಜ್, ವಿಜಯಕುಮಾರ್ ಸೊರಕೆ, ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್., ರಮೇಶ್ ಪೂಜಾರಿ ಚೇಳಾಯರು, ಮಹಿಳಾ ವಿಭಾಗದ ಸರೋಜಿನಿ ಶಾಂತರಾಜ್, ನರೇಶ್ ಕುಮಾರ್ ಸಸಿಹಿತ್ಲು, ಶರತ್ ಅಡ್ವೆ, ಚಂದ್ರಹಾಸ್ ಬಳಂಜ, ಎಸ್. ಆರ್. ಪ್ರಭಾತ್ ಉಪಸ್ಥಿತರಿದ್ದರು.