ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು ,76ನೇ ಗಣರಾಜ್ಯೋತ್ಸವ
Tuesday, January 28, 2025
ಎಕ್ಕಾರು:ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು ಇಲ್ಲಿ 76ನೇ ಗಣರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುದೀಪ ಅಮೀನ್ ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು "ಸಂವಿಧಾನದ ಆತ್ಮ ಮತ್ತು ಹೃದಯ" ನಮ್ಮ ದೇಶದ ಸಂವಿಧಾನ ಅದರ ರೂಪುರೇಷೆ ಕಾರ್ಯ ವೈಖರಿ ಮತ್ತು ಆಧುನಿಕ ಭಾರತ ನಿರ್ಮಿಸುವಲ್ಲಿ ಸಂವಿಧಾನದ ಪಾತ್ರ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳ ಕರ್ತವ್ಯ ಗಳ ಬಗ್ಗೆ ಹಾಗೂ ಸಂವಿಧಾನಾತ್ಮಕ ಪರಿಹಾರದ ಹಕ್ಕು ನಮ್ಮ ಹಕ್ಕುಗಳಲ್ಲಿ ಅತಿ ಮುಖ್ಯವಾದುದು ಎಂಬ ವಿಷಯದ ಕುರಿತು ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ಚಿತ್ರಾಶ್ರೀ ಕೆ.ಎಸ್ ಮಾತನಾಡಿದರು.
ಸರಕಾರಿ ಪ್ರಾಯೋಜಿತ "ನಾವು ಮನುಜರು" ಕಾರ್ಯಕ್ರಮದ ಅಂಗವಾಗಿ ನಡೆದಂತಹ ಗ್ರಾಮೀಣ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. "ನಾವು ಮನುಜರು" ಕಾರ್ಯಕ್ರಮದ ನೂಡಲ್ ಶಿಕ್ಷಕಿ ಶ್ರೀಮತಿ ಜ್ಯೋತಿ ಬಿ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಉಮೇಶ್ ರಾವ್ ಎಕ್ಕಾರು, ಸಹಕಾರ ರತ್ನ ಮೋನಪ್ಪ ಶೆಟ್ಟಿ ,ರತ್ನಾಕರ ಶೆಟ್ಟಿ, ಪ್ರಕಾಶ್ ಕುಕ್ಯಾನ್, ಸುರೇಶ್ ,ಶಾಲಾಭಿವೃದ್ಧಿ ಸಮಿತಿ ಸದಸ್ಯ ಸುರೇಶ್ ಶೆಟ್ಟಿ
ಶ್ರೀಮತಿ ಹೇಮಲತಾ ಶರ್ಮಾ, ಶ್ರೀಮತಿ ಬಾನು, ಶಿಕ್ಷಕರಾದ ರಾಜಶ್ರೀ, ವಿನ್ನಿ ನಿರ್ಮಲಾ ಡಿಸೋಜಾ, ವಿದ್ಯಾಲತಾ, ರಮ್ಯಾ ಕೆ, ಜಯಂತಿ, ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಇಂದಿರಾ ಎನ್ ರಾವ್ ಸ್ವಾಗತಿಸಿದರು ಶ್ರೀಮತಿ ವಿದ್ಯಾಗೌರಿ ಕಾರ್ಯಕ್ರಮ ನಿರೂಪಿಸಿದರು. ಡಾ.ಅನಿತ್ ಕುಮಾರ್ ವಂದಿಸಿದರು.