-->


ಸುವರ್ಣ ಸಿರಿ ಸಾಧಕರ ಸಮ್ಮೀಲನ

ಸುವರ್ಣ ಸಿರಿ ಸಾಧಕರ ಸಮ್ಮೀಲನ

ಹಳೆಯಂಗಡಿ:ಒಂದೇ  ಜಾತಿ ಒಂದೇ ಮತ  ಎಂಬ ಶ್ರೀ ನಾರಾಯಣ ಗುರುಗಳ ತತ್ವದ ಪ್ರಕಾರ   ಸಮಾಜದ ಎಲ್ಲಾ ಬಡವರ ಕಣ್ಣಿರನ್ನು ಒರೆಸುವಂತಹ  ಕೆಲಸ ಮಾಡಬೇಕು ಎಂದು  ನವರಸ ನಾಯಕ  , ಸಿನಿಮಾ, ರಂಗಭೂಮಿ ನಟ ಭೋಜರಾಜ ವಾಮಂಜೂರು ಹೇಳಿದರು.ಅವರು ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ಸುವರ್ಣ ಸಂಭ್ರಮದ ಸಾಧಕರ ಸಮ್ಮಿಲನ ಕಾರ್ಯಕ್ರಮದಲ್ಲಿ  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ  ಅಧ್ಯಕ್ಷ ಶ್ರೀ ದೇವಿ ಸಮೂಹ ಸಂಸ್ಥೆಯ ಮುಖ್ಯಸ್ಥ ಎ.ಸದಾನಂದ ಶೆಟ್ಟಿ ಇವರಿಗೆ  "ಸುವರ್ಣ ಸಿರಿ 2025"  ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪೊವಾಯಿ ಶ್ರೀ ರುಂಡಮಾಲಿನಿ ದೇವಸ್ಥಾನದ ಶ್ರೀ ಸುವರ್ಣ ಬಾಬಾ, ಕ್ಷೇತ್ರದ ಪ್ರಧಾನ ಅರ್ಚಕ ಮಹೇಶ್ ಶಾಂತಿ ಆಶೀರ್ವಚನ  ನೀಡಿದರು.
 
 ನಾರಾಯಣ ಗುರು ಸೇವಾ ಸಂಘದ ಕಾರ್ಯಾಧ್ಯಕ್ಷ  ಕೇಶವ ಅಂಚನ್, 
ಚಾರ್ಟರ್ಡ್ ಅಕೌಂಟೆಂಟ್ ಸುನಿಲ್,
ಸಾಹಿತಿ ಮುದ್ದು ಮೂಡುಬೆಳ್ಳೆ,
ಗುಜರಾತ್ ಬಿಲ್ಲವ ಸಂಘದ ವಾಸು ಪೂಜಾರಿ, ಭಟ್ಕಳ ಮಾಜಿ ಶಾಸಕ ಜೆ.ಡಿ. ನಾಯ್ಕ್, ಪೊವಾಯಿ ಕ್ಷೇತ್ರದ ರಾಹುಲ್ ಸುವರ್ಣ, ಊರ್ಮಿಳಾ ರಮೇಶ್, ವಿಶ್ವ ಸಮ್ಮೇಳನದ ಗೌರವಾಧ್ಯಕ್ಷ  ಕೆ.ತೇಜೋಮಯ ಹಾಗೂ ಮತ್ತಿತರರಿದ್ದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ರಂಗದ ಚಾರ್ಲಿ ಚಾಪ್ಲಿನ್ ಸೀತಾರಾಮ್ ಕುಮಾರ್, 
ಸಿನಿಮಾ ಹಾಗೂ  ರಂಗಭೂಮಿ ನಟ ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ನವೀನ್ ಡಿ ಪಡೀಲ್,
ಅರ್ಜುನ್ ಕಾಪಿಕಾಡ್, ಉಮೇಶ್ ಮಿಜಾರ್, ತುಳು ಕನ್ನಡ ಸಾಹಿತಿ ಮುದ್ದು ಮೂಡುಬೆಳ್ಳೆ, ಕ್ರೀಡಾಪಟು ಸುಕೇಶ್ ಅಮೀನ್ ಕಾರ್ಕಳ,  ರಾಷ್ಟ್ರೀಯ ಹಾಕಿ ತಂಡದ ಕೋಚ್ ಜನಾರ್ಧನ ಸಿಬಿ, ಕೊಡಗಿನ  ಕ್ರೀಡಾ ತರಬೇತುದಾರ 
ಧರ್ಮಾವತಿ ಸುರೇಶ್  ರವರನ್ನು ಗೌರವಿಸಲಾಯಿತು.
 ವಿಶ್ವ  ಸುವರ್ಣ ಸಿರಿ ಸಮ್ಮೇಳನ ಸಮಿತಿಯ 
ಸಿ.ಬಿ.ಕರ್ಕೇರ,
ಪ್ರಕಾಶ್ ಬಿ.ಎನ್.,
ರಮೇಶ್ ಚೇಳಾರು
ಮಹಿಳಾ ಸಮಿತಿಯ  ಸರೋಜಿನಿ ಶಾಂತರಾಜ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ನರೇಶ್ ಕುಮಾರ್ ಸಸಿಹಿತ್ಲು ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ, ಎಸ್. ಆರ್ ಪ್ರಭಾತ್ ನಿರೂಪಿಸಿದರು. ಎಸ್ ಆರ್ ಪ್ರದೀಪ್ ವಂದಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article