ಶ್ರೀ ಕ್ಷೇತ್ರ ಮಂದಾರಬೈಲಿನಲ್ಲಿ ಜ. 26ರಿಂದ ಫೆ. 2ರತನಕ ವರ್ಷಾವಧಿ ಕೋಲಬಲಿ ಸೇವೆ
Monday, January 27, 2025
ಮಂಗಳೂರು :ಕೊಂಚಾಡಿಯ ಶ್ರೀ ಕ್ಷೇತ್ರ ಮಂದಾರಬೈಲು ಇಲ್ಲಿ ಜ. 26ರಿಂದ ಫೆಬ್ರವರಿ 2ರವರೆಗೆ ಸಾನಿಧ್ಯದ ಶ್ರೀ ರಕ್ತೇಶ್ವರಿ, ಶ್ರೀ ಮಂತ್ರದೇವತೆ ಮತ್ತು ಶ್ರೀ ಗುಳಿಗ ದೈವಗಳ ವರ್ಷಾವಧಿ ಕೋಲಬಲಿ ಸೇವೆ, ಧಾರ್ಮಿಕ ಕಾರ್ಯಕ್ರಮ, ವಿಶೇಷ ಅಷ್ಟನಾದ ಉಯ್ಯಾಲೆ ಸೇವೆ, ದೀಪಾಲಂಕಾರ ಸೇವೆ, ಸಾಮೂಹಿಕ ಸರ್ವಾಲಂಕಾರ ಸೇವೆ, 1008 ಸೀಯಾಳಾಭಿಷೇಕ, ನಾಗದೇವರಿಗೆ ಆಶ್ಲೇಷ ಬಲಿ ಸೇವೆ ನಡೆಯಲಿದೆ.
ಜ. 26ರಂದು ಬೆಳಿಗ್ಗೆ 5:30ರಿಂದ ತಾಯಿಗೆ ಪಂಚಾಮೃತಾಭಿಷೇಕ, ನವಕ ಕಲಶಾಭಿಷೇಕ, 108 ತೆಂಗಿನಕಾಯಿಯ ಗಣಪತಿ ಯಾಗ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ನಡೆಯಲಿದೆ. ಜ. 27ರಂದು ಬೆಳಿಗ್ಗೆ 9:30ರಿಂದ ಶ್ರೀ ಕ್ಷೇತ್ರ ಕದ್ರಿಯಲ್ಲಿ ಮಂಜುನಾಥ ದೇವರಿಗೆ ಶತರುದ್ರಾಭಿಷೇಕ, ಸಂಜೆ 7ಕ್ಕೆ ರಂಗಪೂಜೆ ಬೆಳ್ಳಿ ರಥೋತ್ಸವ ಜರುಗಲಿದೆ.
ಜ. 28ರಂದು ಬೆಳಿಗ್ಗೆ 8ರಿಂದ ನಾಗದೇವರಿಗೆ ತಂಬಿಲ ಸೇವೆ, ಆಶ್ಲೇಷ ಬಲಿ, ಮೃತ್ಯುಂಜಯ ಹೋಮ, ಮಂದಾರಬೈಲು ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವರಿಗೆ ರಂಗಪೂಜೆ, ಅನ್ನಸಂತರ್ಪಣೆ, ಜ. 29ರಂದು ಬೆಳಿಗ್ಗೆ ಸಾಮೂಹಿಕ ಸರ್ವಾಲಂಕಾರ ಪೂಜೆ, ತಾಯಿಗೆ ಅಷ್ಟನಾದದೊಂದಿಗೆ ವಿಶೇಷ ಉಯ್ಯಾಲೆ ಸೇವೆ, ಜ. 30ರಂದು ಸಂಜೆ 6:30ಕ್ಕೆ ಶ್ರೀ ರಕ್ತೇಶ್ವರಿ, ಮಂತ್ರದೇವತೆ ಹಾಗೂ ಗುಳಿಗ ದೈವಗಳಿಗೆ ವಿಶೇಷ ದೀಪಾಲಂಕಾರ ಸೇವೆ, ಪಲ್ಲಕಿ ಬಲಿ, ಜ. 31ರಂದು ಬೆಳಿಗ್ಗೆ ತಾಯಿಗೆ ವಿಶೇಷ 1008 ಸೀಯಾಳಾಭಿಷೇಕ, ತಾಯಿಗೆ ಬೆಳ್ಳಿ-ಬಂಗಾರ ಹರಕೆ ಸಮರ್ಪಣೆ, ವಿವಿಧ ಭಜನಾ ತಂಡಗಳಿಂದ ಭಜನಾ ಸತ್ಸಂಗ ನಡೆಯಲಿದೆ.
ಫೆ. 1ರಂದು ಬೆಳಿಗ್ಗೆ 8:30ರಿಂದ ಶ್ರೀ ಸತ್ಯನಾರಾಯಣ ಪೂಜೆ, ಭಂಡಾರ ಏರುವುದು, ಸಂಜೆ 7:30ರಿಂದ ರಕ್ತೇಶ್ವರಿ, ಮಂತ್ರದೇವತೆ ದೈವಗಳ ಕೋಲಬಲಿ ಸೇವೆ, ಬೆಳ್ಳಿ ರಥೋತ್ಸವ, ತುಲಾಭಾರ, ಅಭಯ ಪ್ರದಾನ, ಫೆ. 2ರಂದು ಸಂಜೆ 5:30ರಿಂದ ವರ್ಷಾವಧಿ ಅಗೇಲು ಸೇವೆ, ರಾತ್ರಿ 8:05ರಿಂದ ಶ್ರೀ ಗುಳಿಗ ದೈವದ ಕೋಲಬಲಿ ಸೇವೆ ನಡೆಯಲಿದೆ. ಎಲ್ಲ ದಿನವೂ ಶ್ರೀ ಕ್ಷೇತ್ರದಲ್ಲಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಪ್ರಕಟಣೆ ತಿಳಿಸಿದೆ.