-->


ಕರಂಬಾರು:ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 75 ನೇ  ಗಣರಾಜ್ಯೋತ್ಸವ

ಕರಂಬಾರು:ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 75 ನೇ ಗಣರಾಜ್ಯೋತ್ಸವ

ಕರಂಬಾರು:ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇಲ್ಲಿ 75 ನೇ  ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು,ಶಾಲಾ ಎಸ್ ಡಿ ಎಂ ಸಿ  ಅಧ್ಯಕ್ಷ  ಗುಣಪಾಲ್ ದೇವಾಡಿಗ ಧ್ವಜಾರೋಹಣ ನೆರವೇರಿಸಿ ಮಾತನಾಡಿ  ಭಾರತದ ಸಂವಿಧಾನ ಜಾರಿಗೆ ಬಂದ  ಮಹತ್ವದ ದಿನದಂದು  ಪ್ರಧಾನ ಶಿಲ್ಪಿಗಳಾದ ಡಾ, ಅಂಬೇಡ್ಕರ್ ಅವರನ್ನ ನೆನೆಯೋಣ.
  ಭಾರತದ ಸಂವಿಧಾನ  ಪ್ರತಿಪಾದಿಸುವ ಮೌಲ್ಯಗಳನ್ನು ಪಾಲಿಸೋಣ  ಎಂದು ಹೇಳಿದರು. 
 ಮುಖ್ಯ ಅತಿಥಿ ಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ,
ಉಪಾಧ್ಯಕ್ಷ  ರಾಕೇಶ್ ಕುಂದರ್,
ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಎಸ್ ಡಿ ಎಂಸಿ 
 ಉಪಾಧ್ಯಕ್ಷ  ಲಾವಣ್ಯ,
 ಯುವವಾಹಿನಿ (ರಿ ) ಕೆಂಜಾರು  ಕರಂಬಾರು ಅಧ್ಯಕ್ಷ  ವಿನೋದ್ ಅರ್ಬಿ, ನಮ್ಮ ಜವನೆರ್ ಅಧ್ಯಕ್ಷ ಗ್ರೇಶನ್ ಡಿಕೋಸ್ಟ, ನಮ್ಮ ಜವನೆರ್ ಗೌರವಧ್ಯಕ್ಷ   ರಮೇಶ್ ಸುವರ್ಣ ಉಪಸ್ಥಿತರಿದ್ದರು.
 ಶಾಲಾ ಮುಖ್ಯ ಶಿಕ್ಷಕಿ ಉಷಾ ಕಿರಣ ಸ್ವಾಗತಿಸಿದರು.
ಶ್ರೀಮತಿ ಮಾಲಾಶ್ರೀ ಕಾರ್ಯಕ್ರಮ ನಿರೂಪಿಸಿದರು.
 ಶ್ರೀಮತಿ ಗೀತಾ ವಂದಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article