
ಮಂಗಳೂರು ಸರ್ಫ್ ಕ್ಲಬ್ ಬೀಚ್ ನಲ್ಲಿ ಡೆನ್ ಡೆನ್ -2025 ಸಮುದ್ರ ದಲ್ಲಿ ಈಜು ಸ್ಪರ್ಧೆ
Sunday, January 26, 2025
ಮಂಗಳೂರು ಸರ್ಫ್ ಕ್ಲಬ್ ಆಶ್ರಯದಲ್ಲಿ ಜನವರಿ 26ರಂದು ಮಂಗಳೂರು ಸರ್ಫ್ ಕ್ಲಬ್ ಬೀಚ್ ನಲ್ಲಿ ಡೆನ್ ಡೆನ್ -2025 ಸಮುದ್ರ ದಲ್ಲಿ ಈಜು ಸ್ಪರ್ಧೆ ಜರಗಲಿದ್ದು ದೆಹಲಿ,ಮಹಾರಾಷ್ತ್ರ,ಕರ್ನಾಟಕ,ಕೇರಳ,ಪಶ್ಚಿಮ ಬಂಗಾಳ,ಮಧ್ಯಪ್ರಧೇಶ,ತಮಿಳುನಾಡು,ಗೋವಾ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಸುಮಾರು 200 ಮಂದಿ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ,10 ವರ್ಷದಿಂದ ಮೇಲ್ಪಟ್ಟು ಒಟ್ಟು 5 ವಿಭಾಗದಲ್ಲಿ 250 ಮೀಟರ್ ನಿಂದ 6 ಕಿ.ಮಿ ವರೆಗೆ ಸ್ಪರ್ಧೆ ನಡೆಯಲಿದ್ದು 10ರಿಂದ 11 ವರ್ಷದವರೆಗೆ 250ರಿಂದ 500 ಮೀಟರ್,12ರಿಂದ 14 ವಯೋಮಾನದವರಿಗೆ 1.5 ಕಿಮಿ ವರೆಗೆ.15ರಿಂದ 17 ರ ವಯೋಮಾನದವರಿಗೆ 1.5 ರಿಂದ 3.ಕಿ.ಮಿ ಹಾಗೂ 18 ವರ್ಷ ಮೇಲ್ಪಟ್ಟವರಿಗೆ 1.5.,3. ಮತ್ತು 6 ಕಿ.ಮಿ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.2007ರಲ್ಲಿ ಸಂಕನ್ ಡೆನ್ ಡೆನ್ ವೆಸೆಲ್ ಜಲ ಕ್ರೀಡೆಯಲ್ಲಿ ಹೆಚ್ಚಿನವರು ಭಾಗವಹಿಸಬೇಕೆಂಬ ಉದ್ದೇಶದಿಂದ ಸ್ಪರ್ಧೆಯನ್ನು ಆರಂಭಿಸಿದ್ದು ನಿರಂತರ ನಡೆಯುತ್ತಿದೆ.