ವಿಶ್ವ ಸಮ್ಮೇಳನ ಉದ್ಘಾಟನೆ
Sunday, January 26, 2025
ಹಳೆಯಂಗಡಿ:ಬಿಲ್ಲವರು,ಈಡಿಗರು ಸೇರಿ ಒಟ್ಟು 26 ಪಂಗಡದವರು ಸಂಘಟನಾತ್ಮಕವಾಗಿ ಒಟ್ಟಾಗಿ ಇತರ ಸಮುದಾಯಗಳಿಗೂ ಮಾದರಿಯಾಗಬೇಕು. ಅಂತಹ ಶಕ್ತಿ ಬಹುಸಂಖ್ಯಾತ ಬಿಲ್ಲವ ಸಮಾಜಕ್ಕಿದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು ಅವರು ದಿ.ಕಾಂತು ಲಕ್ಕಣ ಗುರಿಕಾರರು ಯಾನೆ ಪಠೇಲ್ ಯಾದವ ಜಿ ಬಂಗೇರ ವೇದಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಗ್ಗಿದಕಳಿಯ ಸಸಿಹಿತ್ಲು ಇದರ ಸುವರ್ಣ ಮಹೋತ್ಸವ ವರ್ಷಾಚರಣೆ, ಸುವರ್ಣ ಮಹೋತ್ಸವ ಸವಿ ನೆನಪಿಗಾಗಿ ಬಿಲ್ಲವ , ತೀಯಾ, ಆರ್ಯ ಈಡಿಗ ನಾಮದಾರಿಗಳ 26 ಪಂಗಡಗಳ ವಿಶ್ವ ಸಮ್ಮೇಳನ, ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸುವರ್ಣ ಸಿರಿ ಕಾರ್ಯಕ್ರಮದ ಸುವರ್ಣಾಕ್ಷರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಬಿಲ್ಲವ ಸಮುದಾಯದ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದರು.
ಮುಂಬೈ ಪೊವಾಯಿ ಶ್ರೀರುಂಡಮಾಲಿನಿ ದೇವಸ್ಥಾನದ ಶ್ರೀಸುವರ್ಣ ಬಾಬಾ,ಶ್ರೀಕ್ಷೇತ್ರ ಬಲ್ಯೋಟ್ಟು ಸೋಲೂರು ಮಠದ ಶ್ರೀ ವಿಖ್ಯಾತನಂದ ಸ್ವಾಮೀಜಿ,ಬೆಳಗಾವಿ ನಿಪ್ಪಾಣಿ ಮಠದ ಶ್ರೀ ಅರುಣಾನಂದ ಸ್ವಾಮಿಜೀ ಆಶೀರ್ವಚನವನ್ನು ನೀಡಿದರು.
ನಾರಾಯಣ ಗುರು ವಿಚಾರ ವೇದಿಕೆದ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಅಭಿವೃದ್ಧಿಗಾಗಿ ಬಿಲ್ಲವ ನಿಗಮ, ಅಭಿವೃದ್ಧಿ ಕೋಶದ ಸಮಿತಿ ರಚನೆ, ಅನುದಾನ, ಬಜ್ಪೆ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ರ ಹೆಸರು ಕಾಂತರಾಜ್ ವರದಿ ಜಾರಿ ಮುಂತಾದ ಕೆಲವು ಪ್ರಮುಖ ಬೇಡಿಕೆ ಜಾರಿಯಾಗ ಲು ನೇರವಾಗಿ ಸರಕಾರದ ಗಮನಕ್ಕೆ ತರಬೇಕು ಎಂದರು.
ಈ ಸಂದರ್ಭ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ನಾರಾಯಣ ಟಿ ಪೂಜಾರಿ ಇವರಿಗೆ ಬಿಲ್ಲವ ರತ್ನ ಪ್ರಶಸ್ತಿ, ಗುಜರಾತ್ ಉದ್ಯಮಿ ದಯಾನಂದ ಬೋಂಟ್ರ ಅವರಿಗೆ ಬಿಲ್ಲವ ಸುವರ್ಣ ರತ್ನ, ಒಮಾನ್ ಬಿಲ್ಲವಾಸ್ ನ ಸ್ಥಾಪಕ ಸದಸ್ಯ ಎಸ್.ಕೆ ಪೂಜಾರಿ, ಬಿಲ್ಲವ ಫ್ಯಾಮಿಲಿ ದುಬೈ ನ ದೀಪಕ್ ಪೂಜಾರಿ ಇವರಿಗೆ ಬಿಲ್ಲವ ಸೇವಾರತ್ನ ಹಾಗೂ ಗರೋಡಿ ಸ್ಟೀಲ್ ನ ಮನೋಜ್ ಸರಿಪಳ್ಳ ಇವರಿಗೆ ಬಿಲ್ಲವ ಯುವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಹುಭಾಷಾ ನಟ ಸುಮನ್ ತಲ್ವಾರ್, ರಾಜಶೇಖರ ಕೋಟ್ಯಾನ್ ಹಾಗೂ ಸಾಹಿತಿ ಬಾಬು ಶಿವ ಪೂಜಾರಿ ಯವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಈ ಸಂದರ್ಭ ಸಂಸದ ಕೋಟ ಶ್ರೀನಿವಾಸ ಪೂಜಾರಿ,
ಶಾಸಕರಾದ ಸುನಿಲ್ ಕುಮಾರ್, ಉಮಾನಾಥ ಕೋಟ್ಯಾನ್, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ,
ಮಾಜಿ ಸಚಿವ ವಿನಯಕುಮಾರ್ ಸೊರಕೆ,ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ
ಡಾ.ರಾಜಶೇಖರ ಕೋಟ್ಯಾನ್, ಮಾಜಿ ಎಂಎಲ್ ಸಿ
ಎಚ್ ಆರ್ ಶ್ರೀನಾಥ್,
ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್. ಎಸ್ ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಆರ್., ಕಟಪಾಡಿ ವಿಶ್ವನಾಥ ಕ್ಷೇತ್ರದ ಬಿಎನ್ ಶಂಕರ ಪೂಜಾರಿ, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ,
ಗುಜರಾತ್ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಮನೋಜ್ ಪೂಜಾರಿ,
ಚಂದ್ರಹಾಸ್ ಅಮೀನ್,ಯುವವಾಹಿನಿ ಮಂಗಳೂರು ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಒಮಾನ್ ಬಿಲ್ಲವಾಸ್ ಅಧ್ಯಕ್ಷ ಉಮೇಶ ಬಂಟ್ವಾಳ , ಕೃಷ್ಣ ಸುವರ್ಣ, ಶಾರದಾ ಸೂರು ಕರ್ಕೇರ, ಮುಂಬೈ ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಜಿ ಬಂಗೇರ, ಬೆಂಗಳೂರು ಬಿಲ್ಲವರ ಸಂಘದ ಅಧ್ಯಕ್ಷ ವೇದಪ್ರಕಾಶ್,
ಮಾಜಿ ಎಂಎಲ್ ಸಿ ಹರೀಶ್ ಕುಮಾರ್,
ದುಬೈ ಬಿಲ್ಲವರ ಸಂಘದ ಅಧ್ಯಕ್ಷ ದೀಪಕ್ ಪೂಜಾರಿ,
ನಾರಾಯಣ ಗುರು ಚಾರಿಟೇಬಲ್ ಟ್ರಸ್ಟ್ ನ ಅಚ್ಯುತ ಅಮೀನ್ ಕಲ್ಮಾಡಿ, ಉಮೇಶ್ ಪೂಜಾರಿ, ಜೆಪಿ ಪ್ರತಿಷ್ಠಾನದ ಜೆ.ಪಿ.ಸುಧಾಕರ, ಜಾಲಪ್ಪ ಅಕಾಡೆಮಿಯ ರಾಜೇಂದ್ರ ಜಾಲಪ್ಪ, ಬಿಲ್ಲವಾಸ್ ದುಬೈ ನ ಸತೀಶ್ ಪೂಜಾರಿ, ಆರ್ಯ ಈಡಿಗ ಸಂಘದ ಕಾರ್ಯದರ್ಶಿ ನಾಗನಾಥ್,
ಪೂನಾ ಬಿಲ್ಲವ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ವೆಂಕಟೇಶ್ ಶಿಂಧೆ, ನಾರಾಯಣ ಗುತ್ತೇದಾರ್, ಮೂಡಾ ಮಾಜಿ ಅಧ್ಯಕ್ಷ ಕೆ.ತೇಜೋಮಯ, ವಿಶ್ವ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ
ಚಂದಯ್ಯ ಬಿ. ಕರ್ಕೇರ, ಅಧ್ಯಕ್ಷ ರಮೇಶ್ ಕುಮಾರ್ ಚೇಳಾರ್,ಮಹಿಳಾ ಸಮಿತಿಯ ಅಧ್ಯಕ್ಷ
ಸರೋಜಿನಿ ಶಾಂತರಾಜ್ ಪಾಲ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಅಗ್ಗಿದಕಳಿಯ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಬಿಎನ್ ಸ್ವಾಗತಿಸಿದರು.
ನರೇಶ್ ಕುಮಾರ್ ವಂದಿಸಿದರು. ಚಂದ್ರಹಾಸ್ ಬಳಂಜ, ಸ್ಮಿತೇಶ್ ಭಾರ್ಯ, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.