ಸಸಿಹಿತ್ಲು ನಾರಾಯಣಗುರು ಸೇವಾ ಸಂಘ ಅಗ್ಗಿದ ಕಳಿಯ ಇದರ ಸುವರ್ಣಮಹೋತ್ಸವ, ಬೀಚ್ ಫೆಸ್ಟಿವಲ್ ಉದ್ಘಾಟನೆ
Friday, January 24, 2025
ಹಳೆಯಂಗಡಿ: ಸಸಿಹಿತ್ಲು ನಾರಾಯಣಗುರು ಸೇವಾ ಸಂಘ ಅಗ್ಗಿದ ಕಳಿಯ ಇದರ ಸುವರ್ಣಮಹೋತ್ಸವದ ಅಂಗವಾಗಿ ಸುವರ್ಣ ಸಿರಿ ಬೀಚ್ ಫೆಸ್ಟಿವಲ್ ನ್ನು ಮುಂಬೈ ಶ್ರೀಕ್ಷೇತ್ರ ಪೂವಾಯಿಯ
ಸುವರ್ಣ ಬಾಬಾ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಾರಾಯಣಗುರುಗಳ ಜಾತ್ಯಾತೀತತೆಯ ಜಾಗೃತಿಯಿಂದ ಸಮಾಜ ಬೆಳೆದಿದೆ. ಸಂಘಟನಾತ್ಮಕವಾಗಿ ಬೆಳೆಯುವಾಗ ಜಾತಿ ಮತ ಭೇಧವಿಲ್ಲದೇ ಸಮಾಜಮುಖಿಯಾಗಿ ಬೆಳೆಯಿರಿ ಎಂದರು.
ಈ ವೇಳೆ ಅಖಿಲ ಭಾರತ ದೇವಾಡಿಗ ಸಮಾಜ ಸಂಘಟನೆಯ ಅಧ್ಯಕ್ಷ ಧರ್ಮಪಾಲ ದೇವಾಡಿಗ ಅವರಿಗೆ ಸುವರ್ಣಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮ್ಮೇಳನದ ಸಂಚಾಲಕ ರಮೇಶ್ ಪೂಜಾರಿ ಚೆಳ್ಯಾರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಶ್ರೀನಿವಾಸ್ ಯಾನೆ ಅಪ್ಪು ಪೂಜಾರಿ, ಗುಜರಾತ್ ಬಿಲ್ಲವ ಸಂಘದ ಹರೀಶ್ ಪೂಜಾರಿ,
ಉದ್ಯಮಿ ಧನಂಜಯ ಶೆಟ್ಟಿ, ಎಲ್.ವಿ.ಅಮೀನ್ ಮುಂಬೈ,
ಮೀನಾಕ್ಷಿ ಶಿಂದೆ ಥಾಣೆ, ಮನಪಾದ ವಿಪಕ್ಷ ನಾಯಕ ಅನಿಲ್ ಪೂಜಾರಿ, ಮುಂಬೈ ತೀಯ ಸಮಾಜದ ಚಂದ್ರಶೇಖರ ಬೆಳ್ಚಡ, ರಾಜಶೇಖರ ಕೋಟ್ಯಾನ್,
ಶಿವಮೊಗ್ಗದ ಬಿಲ್ಲವ ಸಂಘದ ಭುಜಂಗ ಕೆ., ಸಿ.ಬಿ ಕರ್ಕೇರ,
ಮನೋಜ್ ನಾಗ್ ಪಾಲ್ ಮುಂಬೈ, ಸತ್ಯಜಿತ್ ಸುರತ್ಕಲ್, ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್, ಆರೋಗ್ಯ ಇಲಾಖೆಯ, ಉಲ್ಲಾಸ್ ರಂಗಯ್ಯ, ನಿಶ್ಚಲ್ ಶೆಟ್ಟಿ ವೈಷ್ಣವಿ ಕಾರ್ಗೋ, ಮಹಿಳಾ ಸಂಘದ ಸರೋಜಿನಿ ಶಾಂತಾರಾಜ್,ವಿವಿಧ ಸಮಿತಿಯ ಸದಸ್ಯರುಗಳು ಮತ್ತಿತರರು ಇದ್ದರು.
ನರೇಶ್ ಸಸಿಹಿತ್ಲು ಸ್ವಾಗತಿಸಿದರು, ಎಸ್.ಆರ್.ಪ್ರಭಾತ್ ವಂದಿಸಿದರು.