ಜ.12 : ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಜೀರ್ಣೋದ್ಧಾರದ ಏಕಶಿಲಾ ಧ್ವಜಸ್ತಂಭದ ಮೆರವಣಿಗೆ
Friday, January 10, 2025
ಸಸಿಹಿತ್ಲು : ಬಿಲ್ಲವರ ಹಿತವರ್ಧಕ ಸಂಘ (ರಿ) ಸಂಚಾಲಕತ್ವದ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಏಕ ಶಿಲಾ ಧ್ವಜಸ್ತಂಭದ ಮೆರವಣಿಗೆ ಜ.12 ರಂದು ಭಾನುವಾರ 3 ಗಂಟೆಗೆ ಮುಕ್ಕದಿಂದ ಪ್ರಾರಂಭಗೊಳ್ಳಲಿದೆ.
ಅದೇ ದಿನ ಮಧ್ಯಾಹ್ನ 2 ಗಂಟೆಗೆ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಆವರಣದಲ್ಲಿ ಮುಲ್ಕಿ ಸೀಮೆ ಅರಸರಾದ ಶ್ರೀ ದುಗ್ಗಣ್ಣ ಸಾವಂತರು, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರು ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಕ್ಷೇತ್ರದ ಪುರೋಹಿತರಾದ ರಂಗ ಭಟ್ ಮತ್ತು ವಾಸ್ತುಶಿಲ್ಪಿ ಉಮೇಶ್ ಆಚಾರ್ಯರ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ದೊರಕಲಿದೆ. ಭಕ್ತಾದಿಗಳು ಮಧ್ಯಾಹ್ನ 3 ಗಂಟೆಗೆ ಮುಕ್ಕದಿಂದ ಹೊರಡುವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ, ಮುಂಬೈ ಸಮಿತಿ, ಹೊರನಾಡ ಸಮಿತಿ, ಮಹಿಳಾ ಸಮಿತಿ ಮತ್ತು ನಾಲ್ಕು ಕರೆ ಹತ್ತು ಸಮಸ್ತರು ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.