-->


ಕುಪ್ಪೆಪದವು: ದೊಡ್ಡಳಿಕೆ ಆಣೆಕಟ್ಟಿನಿಂದ  ಎಡದಂಡೆ ನಾಲೆಗೆ ನೀರು ಬಿಡುಗಡೆ

ಕುಪ್ಪೆಪದವು: ದೊಡ್ಡಳಿಕೆ ಆಣೆಕಟ್ಟಿನಿಂದ ಎಡದಂಡೆ ನಾಲೆಗೆ ನೀರು ಬಿಡುಗಡೆ

ಬಜಪೆ:ಕುಪ್ಪೆಪದವು ಗ್ರಾಮ ಪಂಚಾಯತ್ ನ ದೊಡ್ಡಳಿಕೆ ಎಂಬಲ್ಲಿ ಪಲ್ಗುಣಿ ನದಿಗೆ ನಿರ್ಮಿಸಲಾಗಿರುವ ಆಣೆಕಟ್ಟಿನಿಂದ ಕಿಲೆಂಜಾರು, ಕುಲವೂರು, ಮುತ್ತೂರು, ಬಡಗುಳಿಪಾಡಿ ಮತ್ತು ಮಳಲಿ ಗ್ರಾಮಗಳ ರೈತರ ಜಮೀನುಗಳಿಗೆ ನೀರು ಒದಗಿಸುವ ಎಡದಂಡೆ ಕಾಲುವೆಗೆ ನೀರು ಬಿಡುಗಡೆಗೆ  ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ಅವರು   ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಕಾಲುವೆಯ ನೀರು ಸರಬರಾಜು ಉಸ್ತುವಾರಿ ಸಮಿತಿಯ ಅಧ್ಯಕ್ಷ  ದಯಾನಂದ ಶೆಟ್ಟಿ  ಕುಲವೂರು ಹೇಳಿದರು.ಮುತ್ತೂರು ಪಂಚಾಯತ್ ಉಪಾಧ್ಯಕ್ಷೆ ಸುಷ್ಮಾ ಸಂತೋಷ್, ಹಾಲಿ ಸದಸ್ಯ, ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಕುಪ್ಪೆಪದವು ಪಂಚಾಯತ್ ಸದಸ್ಯ ನಿತೇಶ್ ಕುಮಾರ್ ದೊಡ್ಡಳಿಕೆ, ಉಸ್ತುವಾರಿ ಸಮಿತಿಯ ಉಪಾಧ್ಯಕ್ಷ ಉದಯಕುಮಾರ್ ಕಂಬಳಿ, ಕಾರ್ಯದರ್ಶಿ ವಿಜಯಕುಮಾರ್ ಶೆಟ್ಟಿ ಮೇಗಿನ ಮನೆ ಕುಳವೂರು, ಕೋಶಾಧಿಕಾರಿ ಮಹಾಬಲ ಸಾಲ್ಯಾನ್ ಕೊಂದರಪ್ಪು ಮತ್ತಿತರರು ಹಾಜರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article