ಅರಸು ರಕ್ಷಕ್, ಅರಸು ಶಿಕ್ಷಣ ಸಮೃದ್ಧಿ ಯೋಜನೆ ಉದ್ಘಾಟನೆ
Friday, January 10, 2025
ಮುಲ್ಕಿ: ಮುಲ್ಕಿ ಅರಮನೆಯ ಧರ್ಮಚಾವಡಿಯಲ್ಲಿ ಅರಸು ರಕ್ಷಕ ಯೋಜನೆ ಹಾಗೂ ಅರಸು ಶಿಕ್ಷಣ ಸಮೃದ್ಧಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರದಂದು ನಡೆಯಿತು.
ಬೆಂಗಳೂರು ವಾಣಿ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಶಾರದಾ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಮುಲ್ಕಿ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ಅರಮನೆ ವತಿಯಿಂದ ಜನರಿಗೆ ಉಪಯೋಗವಾಗುವಂತಹ ಇಂಥಹ ಕಾರ್ಯಕ್ರಮಗಳು ಮುಂದೆಯೂ ನಡೆಯುತ್ತಿರಲಿ,ಉತ್ತಮ ಕಾರ್ಯಕ್ರಮ ಎಂದು ಹೇಳಿದರು.
ಮುಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅರಮನೆಯ ಎಂ.ಗೌತಮ್ ಜೈನ್, ಪ್ರಿಯದರ್ಶನಿ ಕೋ.ಅಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ್ ಬೆರ್ನಾಡ್, ನಮ್ಮ ಟಿವಿ ವಾಹಿನಿಯ ಮುಖ್ಯ ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್ , ವಿದ್ಯಾಶಂಕರ್ ಉಪಸ್ಥಿತರಿದ್ದರು.
ವಿನೋದ್ ಸಾಲಿಯನ್ ಕಾರ್ಯಕ್ರಮ ನಿರೂಪಿಸಿದರು.