ಪಡುಪೆರಾರ:ಕುಡುಮ ಅಣೆಕಟ್ಟು ಉದ್ಘಾಟನೆ
Thursday, January 23, 2025
ಬಜಪೆ:ಪಡುಪೆರಾರ ಪಂಚಾಯತ್ ವ್ಯಾಪ್ತಿಯ ವಿವಿಧ ಡ್ಯಾಮ್ ಗಳ ನಿರ್ಮಾಣ ಹಾಗು ಅಭಿವೃದ್ಧಿ ಕಾರ್ಯಕ್ಕೆ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ತಮ್ಮ ಪ್ರಥಮ ಅವಧಿಯಲ್ಲಿ ಸುಮಾರು 9 ಕೋಟಿ ಅನುದಾನ ಒದಗಿಸಿರುತ್ತಾರೆ.ಈ ಅನುದಾನದ ಮುಂದುವರಿದ ಭಾಗವಾಗಿ ಶ್ರೀ ಕ್ಷೇತ್ರ ಪೆರಾರ ಬ್ರಹ್ಮ ಬಲಾಂಡಿ ದೈವಸ್ಥಾನದ ಬಳಿ ಇರುವ ಕುಡುಮದ ಅಣೆಕಟ್ಟಿಗೆ 1ಕೋಟಿ 60 ಲಕ್ಷ ಅನುದಾನ ಒದಗಿಸಿದರು.ಇದರ ಕಾಮಗಾರಿ ಪೂರ್ಣಗೊಂಡು ಗ್ರಾಮಸ್ಥರ ಸಮ್ಮುಖದಲ್ಲಿ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ಪಡುಪೆರಾರ ಪಂಚಾಯತ್ ವ್ಯಾಪ್ತಿಯ ಜನರಿಗಿರುವ ನೀರಿನ ಸಮಸ್ಯೆ ನಿವಾರಿಸಲು ಹಾಗು ಸ್ಥಳೀಯ ಭಾಗದ ಜನತೆಯ ಕೃಷಿ ಕಾರ್ಯಗಳ ಅಭಿವೃದ್ಧಿಗಾಗಿ ಶಾಸಕರು ತಮ್ಮ ವಿಶೇಷ ಮುತುರ್ವಜಿಯೊಂದಿಗೆ ಕೈಗೊಂಡ ಈ ಅಭಿವೃದ್ಧಿ ಕಾರ್ಯಕ್ಕಾಗಿ ಶಾಸಕರಿಗೆ ಗ್ರಾಮಸ್ಥರು ಸನ್ಮಾನಿಸಿದರು.
ಅಣೆಕಟ್ಟಿನ ಉದ್ಘಾಟನಾ ಕಾರ್ಯಕ್ರಮ `ನಮೋ ನಂದಿನಿ´ ವಿಶೇಷ ಕಾರ್ಯಕ್ರಮದೊಂದಿಗೆ ದೀಪ ಬೆಳಗಿಸಿ ನಡೆಸಲಾಯಿತು.ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ದನ ಗೌಡ ಮುಚ್ಚೂರು, ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ,ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.