ಅಮೃತ ಸೇವಾ ಮಹೋತ್ಸವ, 12 ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತಾಂತರ ಮತ್ತು ಬೃಹತ್ ರಕ್ತದಾನ ಶಿಬಿರ
Thursday, January 23, 2025
ಎಡಪದವು:ಜನರ ಕಷ್ಟಗಳಿಗೆ ಸ್ಪಂದಿಸುವ ಸಂಘಟನೆಗಳ ಕಾರ್ಯ ಅಭಿನಂದನೀಯ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದರು.ಅವರು ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾ ವಾಹಿನಿ, ಜೈ ಶ್ರೀರಾಮ್ ಶಾಖೆ ಎಡಪದವು ಆಶ್ರಯದಲ್ಲಿ ಎಡಪದವಿನ ಬಜರಂಗದಳ ಸೇವಾ ಬ್ರಿಗೇಡ್‌ನ 75ನೇ ಮಾಸಿಕ ಯೋಜನೆಯ ಅಂಗವಾಗಿ ಎಡಪದವಿನ ಶ್ರೀರಾಮ ಮಂದಿರದ ಪಟ್ಟಾಭಿ ರಾಮ ಸಭಾಭವನದಲ್ಲಿ ನಡೆದ ಅಮೃತ ಸೇವಾ ಮಹೋತ್ಸವದಲ್ಲಿ 12 ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತಾಂತರ ಮತ್ತು ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಈ ಸೇವಾ ಬ್ರಿಗೇಡ್ ನ ಸಾಮಾಜಿಕ ಕಾರ್ಯಗಳಲ್ಲಿ ನಿರಂತರ ಶ್ರಮಿಸಿದವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಧನಂಜಯ್ ಮೇಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿ.ಹಿಂ.ಪ., ಬಜರಂಗದಳದ ಪ್ರಮುಖರಾದ ಭುಜಂಗ್ ಕುಲಾಲ್, ಕೃಷ್ಣ ಕಜೆಪದವು, ವಸಂತ್ ಸುವರ್ಣ, ನವೀನ್ ಮೂಡುಶೆಡ್ಡೆ, ದಿನೇಶ್ ಮಿಜಾರ್, ರಾಜೇಶ್ ಗಂಜಿಮಠ, ಜನಾರ್ದನ್ ಓಡ್ಡೂರು, ಚಂದ್ರಹಾಸ್ ಶೆಟ್ಟಿ ನಾರಳ, ಮನೋಜ್ ಕೋಡಿಕೆರೆ, ವಿಜೇತ್ ರೈ ಪುತ್ತೂರು, ಚರಣ್ ರಾಜ್ ವಾಮಂಜೂರು, ಸಂಪತ್ ಪೂಜಾರಿ, ಬಾಲಕೃಷ್ಣ ಕಣ್ಣೋರಿ ಮತ್ತಿತರರು ಉಪಸ್ಥಿತರಿದ್ದರು.
ಎ.ಜೆ. ಆಸ್ಪತ್ರೆ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 203 ಯೂನಿಟ್ ರಕ್ತ ಸಂಗ್ರಹವಾಯಿತು.ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.