ಭರತನಾಟ್ಯ ಪರೀಕ್ಷೆ ಕಿನ್ನಿಗೋಳಿ ಬಿಲ್ವ ಕಲಾಶಾಲೆಯ ವಿದ್ಯಾರ್ಥಿಗಳು ಉನ್ನತಶ್ರೇಣಿಯಲ್ಲಿ ತೇರ್ಗಡೆ
Thursday, January 23, 2025
ಕಿನ್ನಿಗೋಳಿ : ಇತ್ತೀಚಿಗೆ ಮೈಸೂರು ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕಿನ್ನಿಗೋಳಿ ಬಿಲ್ವ ಕಲಾ ಶಾಲೆಯ ನಿರ್ದೇಶಕಿ ರಶ್ಮಿ ಉಡುಪ ಅವರ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿನಮ್ರ ಹೆರಳೆ(97,25%), ಕೃತಿಕಾ ಟಿ.(94.25%), ಯಶಿತ ಶೆಟ್ಟಿ(88,5%), ಮಧುರ ಹೆರಳೆ(88%), ಜೋಶ್ನ ಶೆಟ್ಟಿಗಾರ್(86.5%), ಅಮೃತವರ್ಷ(86%), ಶ್ರೀವಲ್ಲಿ ಉಡುಪ(83.5%), ದಿಗಂತ ಉಡುಪ(83.25%), ಹಸ್ತ ಶೆಟ್ಟಿ(81%) ತೇರ್ಗಡೆ ಹೊಂದಿದವರು.