ಪ್ರಯತ್ನಕ್ಕೆ ಸ್ವಾಮೀ ವಿವೇಕಾನಂದರು ಉತ್ತಮ ಉದಾಹರಣೆ - ಹಿತ ಉಮೇಶ್
Wednesday, January 22, 2025
ಮೂಲ್ಕಿ:ನಮ್ಮ ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಬರಲಿ ಅವುಗಳ ನಿವಾರಣೆ ಪ್ರಯತ್ನ ಪಡುವವರಿಗೆ ಆತ್ಮವಿಶ್ವಾಸ ಹೊಂದಿರುವವರಿಗೆ ಪರಮಾತ್ಮನು ಸಹಾಯ ಮಾಡುತ್ತಾನೆ. ಪ್ರಯತ್ನಕ್ಕೆ ಸ್ವಾಮಿ ವಿವೇಕಾನಂದರು ಉತ್ತಮ ಉದಾಹರಣೆ ಹಾಗಾಗಿ ಅವರ ಚಿಂತನೆಗಳು ತಿಳಿಸುವ ನಿಟ್ಟಿನಲ್ಲಿ ಪ್ರತೀ ವರುಷವು ಸ್ವಾಮಿ ವಿವೇಕಾನಂದರ ಜನ್ಮ ನಕ್ಷತ್ರದಂದು ಪುನರೂರು ಪ್ರತಿಷ್ಠಾನವು ವಿಶಿಷ್ಟ ರೀತಿಯಲ್ಲಿ ವಿವೇಕಾ ಜಾಗೃತಿಯನ್ನು ಯುವಜನಾಂಗದಲ್ಲಿ ಮೂಡಿಸುತ್ತಾ ಬಂದಿರುತ್ತದೆ ಎಂದು ಯುವ ಪ್ರತಿಭೆ ಕು.ಹಿತ ಉಮೇಶ್ ಕಟೀಲು ಅವರು ಹೇಳಿದರು.ಅವರು ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂ ನ ಸಭಾಂಗಣದಲ್ಲಿ ಜರುಗಿದ ವಿವೇಕಾ ಜಾಗೃತಿ ಸಮಾರಂಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಮೂಲ್ಕಿಯ ಉದ್ಯಮಿ ಶ್ರೀಕಾಂತ್ ಭಟ್ ಹೆಜಮಾಡಿ, ಜನವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷ ಅಕ್ಷತಾ ಶೆಟ್ಟಿ, ಪದಾಧಿಕಾರಿಗಳಾದ ಆನಂದ ಮೇಲಾಂಟ, ಗೀತಾ ಶೆಟ್ಟಿ, ಶಶಿಕರ ಕೆರೆಕಾಡು,ಶೋಭಾ ರಾವ್ ಹಾಗೂ ಸ್ಥಳೀಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಪ್ರಾಣೇಶ್ ಭಟ್ ದೇಂದಡ್ಕ ವಂದಿಸಿದರು, ಶಿಮಂತೂರಿನ ಶ್ರೀ ಶಾರದ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲ ಜಿತೇಂದ್ರ ವಿ ರಾವ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು.