'ಅರಸು ರಕ್ಷಕ ಯೋಜನೆ' ವತಿಯಿಂದ ಬಾಲಕಿಯ ಚಿಕಿತ್ಸೆಗೆ ಧನ ಸಹಾಯ
Wednesday, January 22, 2025
ಮೂಲ್ಕಿ:ಮುಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ನ "ಅರಸು ರಕ್ಷಕ ಯೋಜನೆ" ಮುಲ್ಕಿ ಸೀಮೆಯ ಅರಸರಾದ ಎಂ ದುಗ್ಗಣ್ಣ ಸಾವಂತರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ನಡೆಯುತ್ತಿದೆ.
ಈ ಯೋಜನೆ ಅಡಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತೋಕೂರು ಗ್ರಾಮದ ಬಾಲಕಿಯ ಚಿಕಿತ್ಸೆಗಾಗಿ ಹತ್ತು ಸಾವಿರ ರೂ ವನ್ನು ನೀಡಲಾಯಿತು.
ಅರಮನೆಯ ಗೌತಮ್ ಎಂ ಜೈನ್ ,ಕಾಸಪ್ಪಯ್ಯರಮನೆ ವಕೀಲರಾದ ಚಂದ್ರಶೇಖರ್ ಜಿ, ಪ್ರಿಯದರ್ಶಿನಿ ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾಡ್, ಪಡುಪಣಂಬೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವಿನೋದ್ ಸಾಲಿಯಾನ್ ಬೆಳ್ಳಾಯರು, ಸಾಮಾಜಿಕ ಸೇವಾಕರ್ತ ಧರ್ಮಾನಂದ ಶೆಟ್ಟಿಗಾರ್
ಶ್ರೀ ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್ ತೋಕೂರು ಅಧ್ಯಕ್ಷ ದೀಪಕ್ ಸುವರ್ಣ, ಪಂಚಾಯತ್ ಸದಸ್ಯ ಸಂತೋಷ್ ತೋಕೂರು ಹಾಗೂ ಮೊದಲಾದವರು ಉಪಸ್ಥಿತರಿದ್ದರು.