ಗೋಳಿದಡಿಗುತ್ತಿನ ವರ್ಷದ ಪರ್ಬೊ ಸಂಪನ್ನ
Wednesday, January 22, 2025
ಕೈಕಂಬ:ಗುರುಪುರ ಗೋಳಿದಡಿಗುತ್ತಿನ ಮನೆಯಲ್ಲಿ ಕಳೆದೆರಡು ದಿನಗಳಿಂದ ಗುತ್ತಿನ ಯಜಮಾನ ಗಡಿಕಾರ ವರ್ಧಮಾನ ದುರ್ಗಾ ಪ್ರಸಾದ ಶೆಟ್ಟಿ ಅವರ ಮುಂದಾಳತ್ವದಲ್ಲಿ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ನಡೆಯುತ್ತಿದ್ದ ಸರಳ ಮತ್ತು ಸಂಭ್ರಮದ `ಗುತ್ತುದ ವರ್ಷದ ಪರ್ಬೊ' ಸೋಮವಾರ ರಾತ್ರಿ ಸಂಪನ್ನಗೊಂಡಿತು.
ಶ್ರೀ ವೈದ್ಯನಾಥಾದ್ಯ ಪಂಚದೇವತೆಗಳು ಮತ್ತು ತುಳಸಿ ಆರಾಧನೆಯೊಂದಿಗೆ 2ನೇ ದಿನದ(ಜ. 20) ಪರ್ಬೊ ಆರಂಭಗೊಂಡಿತು. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಸತ್ಸಂಗ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಿತು. ಬೆಳಿಗ್ಗಿನಿಂದ ರಾತ್ರಿಯವರೆಗೆ ನೂರಾರು ಭಕ್ತರು ದೇವರ ಪ್ರಸಾದದೊಂದಿಗೆ ಊಟೋಪಚಾರ ಸ್ವೀಕರಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಪ್ರಯುಕ್ತ ಸಂಜೆ 6ರಿಂದ 8ರವರೆಗೆ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ವಿಸ್ಮಯ ಜಾದೂ, ರಾತ್ರಿ 8:30ರಿಂದ 10:30ರವರೆಗೆ ದಕ್ಷಿಣ ಭಾರತದ ಮಹಮ್ಮದ್ ರಫಿ ಎಂದೇ ಖ್ಯಾತರಾದ ಠಾಗೋರ್‍ದಾಸ್ ಇವರಿಂದ `ಏಕ್ ಶಾಮ್ ರಫೀ ಕೆ ನಾಮ್' ರಸಮಂಜರಿ ನಡೆಯಿತು.
ಗುರುಪುರ ಗೋಳಿದಡಿಗುತ್ತಿನ ಮನೆಯ ಗುತ್ತಿನ ವರ್ಷದ ಪರ್ಬೊ ಅಂಗವಾಗಿ ಭಾನುವಾರ ರಾತ್ರಿ ಆಯೋಜಿಸಲಾದ ಶ್ರೀ ಕ್ಷೇತ್ರ ಪಾವಂಜೆ ಮೇಳದವರ `ಶ್ರೀದೇವಿ ಮಹಾತ್ಮೆ' ಕಾಲಮಿತಿ ಯಕ್ಷಗಾನ ಪ್ರದರ್ಶನದಲ್ಲಿ ಅಬ್ಬರಿಸಿದ ಮಹಿಸಾಸುರ