ವಿಸ್ಮಯ' ಜಾದೂ ಪ್ರದರ್ಶಿಸಿದ ಕುದ್ರೋಳಿ ಗಣೇಶ್ ಅವರಿಗೆ ಗೌರವ
Wednesday, January 22, 2025
ಕೈಕಂಬ:ಗುರುಪುರ ಗೋಳಿದಡಿಗುತ್ತಿನ `ಗುತ್ತುದ ವರ್ಷದ ಪರ್ಬೊ' ಕಾರ್ಯಕ್ರಮದ 2ನೇ ದಿನದಂದು(ಜ. 20) ಸಂಜೆ `ವಿಸ್ಮಯ' ಜಾದೂ ಪ್ರದರ್ಶಿಸಿದ ಕುದ್ರೋಳಿ ಗಣೇಶ್ ಅವರಿಗೆ ಗುತ್ತಿನ ಯಜಮಾನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರು ಶಾಲು ಹೊದಿಸಿ ಗೌರವಿಸಿದರು. ಏಣ್ಮಕಜೆ ಸಿಎ ಸುಧೀರ್ ಶೆಟ್ಟಿ, ಹೋಟೆಲ್ ಉದ್ಯಮಿ ವೈ. ರವಿ ಭಟ್, ನವೀನ್ ಶೆಟ್ಟಿ ಎಡ್ಮೆಮಾರು, ವರ್ಧಮಾನರ ಪುತ್ರಿ ಡಾ. ಸಮನಾ ಶೆಟ್ಟಿ ಉಪಸ್ಥಿತರಿದ್ದರು.