ಕಾರ್ನಾಡ್ ಹಿಮಾಯತುಲ್ ಇಸ್ಲಾಂ ಸಮಿತಿಯ ನೂತನ ಅಧ್ಯಕ್ಷರಾಗಿ ರಿಯಾಜ್ ಮೊಯಿದಿನ್ ಆಯ್ಕೆ
Monday, January 13, 2025
ಮುಲ್ಕಿ:ಕಾರ್ನಾಡ್ ಹಿಮಾಯತುಲ್ ಇಸ್ಲಾಂ ಸಮಿತಿಯ ವಾರ್ಷಿಕ ಮಹಾಸಭೆಯು ಫಾರೂಕ್ ಹಾಜಿ ರವರ ಅಧ್ಯಕ್ಷತೆಯಲ್ಲಿ ನಡೆದು 2025 26 ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ರಿಯಾಜ್ ಮೊಯಿದಿನ್, ಉಪಾಧ್ಯಕ್ಷರಾಗಿ ರಿಜ್ವಾನ್ ಕಾರ್ನಾಡ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಕಿಲ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ರಿಯಾನ್ ಕಾರ್ನಾಡ್, ಖಜಾಂಚಿಯಾಗಿ ಇಬ್ರಾಹಿಂ ಬಾವ ದರ್ಗಾ ರಸ್ತೆ, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಪುತ್ತು ಬಾವ ಕಾರ್ನಾಡ್, ಎಂ ಕೆ ಮೊಹಮ್ಮದ್, ಹಮ್ಮಬ್ಬ ಕಿಲ್ಪಾಡಿ, ಹಸನಬ್ಬ ಕಾರ್ನಾಡ್, ಮೊಹಮ್ಮದ್ ದರ್ಗಾ ರಸ್ತೆ, ಅಸ್ಲಾಂ, ಹನೀಫ್ ಕಾರ್ನಾಡ್, ಮೊಹಮ್ಮದ್ ಸಲೀಂ, ಬಶೀರ್ ಕಿಲ್ಪಾಡಿ, ಬಶೀರ್ ಕೊಲ್ನಾಡ್, ಸವಾಫ್ ಎಂ.ಕೆ.ಕಾರ್ನಾಡ್,ಶಕೀಲ್ ದರ್ಗಾರಸ್ತೆ, ಶುಹೆಬ್ ಕಿಲ್ಪಾಡಿ ರವರನ್ನು ಆಯ್ಕೆ ಮಾಡಲಾಯಿತು ರಿಯಾನ್ ಕಾರ್ನಾಡ್ ಸ್ವಾಗತಿಸಿ ನಿರೂಪಿಸಿದರು