ಕುಳವೂರು:ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ 65ನೇ ವರ್ಷದ ಭಜನಾ ಮಂಗಲೋತ್ಸವ
Tuesday, January 14, 2025
ಕೈಕಂಬ:ಕುಳವೂರು ಬಳ್ಳಾಜೆ ರತ್ನಗಿರಿ ಶ್ರೀ ರಾಮಂಜನೇಯ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ 65ನೇ ವರ್ಷದ ಭಜನಾ ಮಂಗಲೋತ್ಸವವು ಪ್ರಧಾನ ಅರ್ಚಕ ಕೃಷ್ಣ ಅಸ್ರಣ್ಣ ರ ನೇತೃತ್ವದಲ್ಲಿ, ಶನಿವಾರ ಜರಗಿತು.
ಅರ್ಚಕ ನಾಗರಾಜ್ ಭಟ್ ಮತ್ತು ಸಹಾಯಕ ಅರ್ಚಕ ನಿತಿನ್ ಭಟ್ ಪೌರೋಹಿತ್ಯದಲ್ಲಿ 7ಗಂಟೆಗೆ ಗಣಪತಿ ಹೋಮ, 9 ಗಂಟೆಯಿಂದ ಶ್ರೀ ಸತ್ಯನಾರಾಯಣ ಪೂಜೆ ನಡೆದ ಬಳಿಕ ಪ್ರಸಾದ ವಿತರಣೆ, ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ ನಡೆಯಿತು.
ಸಂಜೆ 6:30 ರಿಂದ ಭಾನುವಾರ ಸೂರ್ಯೋದಯವರೆಗೆ ವಿವಿಧ ಭಜನಾ ತಂಡ-ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ಮಂಗಲೋತ್ಸವ ಸಂಪನ್ನಗೊಂಡಿತು.
ಭಜನಾ ಮಂದಿರದ ಗೌರವಾಧ್ಯಕ್ಷ ಸದಾನಂದ ಶೆಟ್ಟಿ ಕೊಳವೂರು ಗುತ್ತು, ಅಧ್ಯಕ್ಷ ತಾರಾನಾಥ ಉಗ್ರಾಯಿ, ಉಪಾಧ್ಯಕ್ಷರುಗಳಾದ ಕಿರಣ್ ಪೂಜಾರಿ ಫಲ್ಕೆ, ವಸಂತ ನಾಯ್ಕ ಬಳ್ಳಾಜೆ, ಕಾರ್ಯದರ್ಶಿ ಪ್ರಜ್ವಲ್ ಜಿ. ಎಸ್. ಬಳ್ಳಾಜೆ, ಜತೆ ಕಾರ್ಯದರ್ಶಿ ಗಿರೀಶ್ ಪೂಜಾರಿ ಬಳ್ಳಾಜೆ, ಲೋಕೇಶ್ ಪೂಜಾರಿ ಸನ್ನಿಕಾಯಿ, ಸಮಿತಿಯ ಪದಾಧಿಕಾರಿಗಳು, ಸದಸ್ಯರು. ಮುತ್ತೂರು ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಉಪಾಧ್ಯಕ್ಷೆ ಸುಷ್ಮಾ ಸಂತೋಷ್, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸತೀಶ್ ಪೂಜಾರಿ ಬಳ್ಳಾಜೆ ಹಾಗೂ ಸದಸ್ಯರುಗಳು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು