-->


ಜ.19 ಮತ್ತು ಜ.20 ಗುರುಪುರ ಗೋಳಿದಡಿಗುತ್ತಿನ  ವರ್ಷದ  'ಗುತ್ತುದ ಪರ್ಬೊ'

ಜ.19 ಮತ್ತು ಜ.20 ಗುರುಪುರ ಗೋಳಿದಡಿಗುತ್ತಿನ ವರ್ಷದ 'ಗುತ್ತುದ ಪರ್ಬೊ'

ಕೈಕಂಬ :ಗುರುಪುರ ಗೋಳಿದಡಿಗುತ್ತಿನ  ವರ್ಷದ  'ಗುತ್ತುದ ಪರ್ಬೊ'ವು  ಜ. 19 ಮತ್ತು 20ರಂದು  ಅತ್ಯಂತ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಯಲಿದೆ ಎಂದು ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರು ಹೇಳಿದರು.ಅವರು ಗುತ್ತು ಮನೆತನದವರು ಹಾಗೂ ಚಾವಡಿ ಮಿತ್ರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾದ ಶ್ರೀಗುರು ಮಹಾಕಾಲೇಶ್ವರ ದೇವರ ಏಕಶಿಲಾ ಮೂರ್ತಿಯ ಬ್ರಹ್ಮಕಲಶ ಪ್ರತಿಷ್ಠಾ ಸಂಭ್ರಮ  ನಡೆಯಲಿರುದರಿಂದ ಈ ವರ್ಷ ಅತ್ಯಂತ ಸರಳ  ಮತ್ತು ಸಾಂಪ್ರದಾಯಿಕವಾಗಿ ನಡೆಯಲಿದೆ ಎಂದರು.

ಜ. 19ರಂದು ಸಂಜೆ 7ರಿಂದ ಶ್ರೀ ಕ್ಷೇ ಕ್ಷೇತ್ರ ಪಾವಂಜೆ ಮೇಳದವರಿಂದ `ಶ್ರೀ ದೇವಿ ಮಹಾತ್ಮೆ' ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಜ. 20ರಂದು ಸಂಜೆ 6ರಿಂದ 8ರವರೆಗೆ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ವಿಸ್ಮಯ ಜಾದೂ, ರಾತ್ರಿ 8:30ರಿಂದ 10:30ರವರೆಗೆ ದಕ್ಷಿಣ ಭಾರತದ ಮಹಮ್ಮದ್ ರಫಿ ಎಂದೇ ಖ್ಯಾತರಾದ ಠಾಗೋರ್‍ದಾಸ್ ಇವರಿಂದ `ಏಕ್ ಶಾಮ್ ರಫೀಕೆ ನಾಮ್' ಹಳೆಯ ಹಾಡುಗಳ ರಸಮಂಜರಿ ಸಾದರಗೊಳ್ಳಲಿದೆ. ಜೊತೆಗೆ ಎರಡೂ ದಿನ ಗೋಳಿದಡಿಗುತ್ತಿನಲ್ಲಿ ಶ್ರೀ ವೈದ್ಯನಾಥಾದ್ಯ ಪಂಚದೇವತೆಗಳ ಆರಾಧನೆ, ಭಜನಾ ಸತ್ಸಂಗ, ಸಾಂಸ್ಕøತಿಕ ಕಾರ್ಯಕ್ರಮ, ನಿರಂತರ ಊಟೋಪಚಾರ ಮತ್ತು ಅತಿಥಿ ಸತ್ಕಾರ ನಡೆಯಲಿದೆ.
 ಗುತ್ತಿನ ಪರ್ಬದ ಎರಡು ದಿನವೂ ಅತಿಥಿ ಸತ್ಕಾರ, ಪ್ರಸಾದ ವಿತರಣೆ ಮತ್ತು ನಿರಂತರ ಊಟೋಪಚಾರದಲ್ಲಿ ಯಾವುದೇ ರೀತಿಯ ತೊಡಕು ಉಂಟಾಗಬಾರದು ಎಂದು ಗಡಿಕಾರರು ಮನವಿ ಮಾಡಿಕೊಂಡರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article