ಡೀಸೆಲ್ ಕಳವು ಮಾಡುತ್ತಿದ್ದ ನಾಲ್ವರ ಬಂಧನ
Tuesday, January 14, 2025
ಸುರತ್ಕಲ್ :ಡೀಸೆಲ್ ಕಳವು ಮಾಡುತ್ತಿದ್ದ ನಾಲ್ವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕುಳಾಯಿಗುಡ್ಡೆ ನಿವಾಸಿ ಸಂತೋಷ್(42), ಕಾಟಿಪಳ್ಳ ನಿವಾಸಿ ಐರನ್ ರಿತೇಶ್ ಮಿನೇಜ್(36), ಬೆಳ್ತಂಗಡಿ ನಿವಾಸಿ ನಾರಾಯಣ್(23), ಉಡುಪಿಯ ಹೆಜಮಾಡಿ ನಿವಾಸಿ ರವಿ ಜನಾರ್ದನ ಪುತ್ರನ್ (59) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ಮಂಗಳೂರು ಹೊರವಲಯದ ಬಾಳ ಗ್ರಾಮದ ಬಳಿ ಇರುವ ಟ್ಯಾಂಕರ್‌ಯಾರ್ಡ್‌ನಲ್ಲಿ ನಿಲ್ಲಿಸಿರುವ ಟ್ಯಾಂಕರ್‌ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದರು. ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಡೀಸೆಲ್ ಕಳವುಗೈದು ದಾಸ್ತಾನು ಇರಿಸಿದ್ದ ಶೆಡ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ದಾಸ್ತಾನು ಇರಿಸಿಟ್ಟಿದ್ದ 1685 ಲೀಟರ್ ಡಿಸೇಲ್ ಮತ್ತು 20 ಲೀಟರ್ ಪೆಟ್ರೋಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.